ಕರ್ನಾಟಕ

karnataka

ಪಿಎಂ ಪರಿಹಾರ ನಿಧಿ ಅವ್ಯವಹಾರ ಆರೋಪ: ಕಾಂಗ್ರೆಸ್ ವಿರುದ್ಧ ಚಿತ್ರದುರ್ಗದಲ್ಲೂ ಪ್ರಕರಣ ದಾಖಲು

By

Published : May 22, 2020, 8:09 PM IST

ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೂರಾರು ಕೋಟಿ ರೂಪಾಯಿ ಹರಿದು ಬಂದಿದೆ. ಈ ಹಿನ್ನೆಲೆ ಆ ಹಣದ ಮಾಹಿತಿ ನೀಡುವಂತೆ ಹಾಗೂ ಆ ಹಣದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೇ ಈ ಕುರಿತು ಸರಣಿ ಟ್ವೀಟ್​ ಸಹ ಮಾಡಿತ್ತು. ಇದರಿಂದ ಪಿಎಂ ಕೇರ್ಸ್​​ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಆರೋಪಿಸಿ ಚಿತ್ರದುಗದಲ್ಲಿ ಕಾಂಗ್ರೆಸ್​ ವಿರುದ್ಧ ಪ್ರಕರಣ ದಾಖಲಾಗಿದೆ.

Case registered against Congress to a series of tweets about PM care fund
ಪಿಎಂ ಪರಿಹಾರ ನಿಧಿ ಅವ್ಯವಹಾರ ಆರೋಪಿಸಿ ಸರಣಿ ಟ್ವೀಟ್: ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲು

ಚಿತ್ರದುರ್ಗ:ಕೊರೊನಾ ವೈರಸ್ ತಡೆಗಟ್ಟಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸಾರ್ವಜನಿಕರು ನೀಡಿರುವ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಟ್ವೀಟ್​ ಮಾಡಿದ್ದ ಕಾಂಗ್ರೆಸ್ ವಿರುದ್ಧ ಜಿಲ್ಲೆಯಲ್ಲೂ ಪ್ರಕರಣ ದಾಖಲಾಗಿದೆ.

ಪರಿಹಾರ ನಿಧಿಯಲ್ಲಿ ಅವ್ಯವಹಾರ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ಐಎನ್​ಸಿ ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್ ಮಾಡುವ ಮೂಲಕ ಜನರ ಹಾದಿ ತಪ್ಪಿಸಿರುವ ಆರೋಪದಡಿ ಪಕ್ಷದ ಟ್ವಿಟರ್ ಖಾತೆ ಹಾಗೂ ಪಕ್ಷದ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಿಎಂ ಪರಿಹಾರ ನಿಧಿ ಅವ್ಯವಹಾರ ಆರೋಪ: ಕಾಂಗ್ರೆಸ್ ವಿರುದ್ಧ ಪ್ರಕರಣ ದಾಖಲು

ವಕೀಲರಾದ ಧನಂಜಯ್ ಎಂಬುವರು ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ಕೂಡ ದಾಖಲಾಗಿದೆ.

ಈ ಕುರಿತು ಬಗ್ಗೆ ಪ್ರತಿಕ್ರಿಯಿಸಿದ ದೂರದಾರ ಧನಂಜಯ್ ಅವರು, ಪಿಎಂ ಪರಿಹಾರ ನಿಧಿಯಲ್ಲಿ ಅವ್ಯವಹಾರ ಆಗಿದೆ ಎಂದು ಐಎನ್​ಸಿ (ಇಂಡಿಯನ್​​ ನ್ಯಾಷನಲ್ ಕಾಂಗ್ರೆಸ್) ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್ ಮಾಡುವ ಮೂಲಕ ಜನರನ್ನು ಹಾದಿ ತಪ್ಪಿಸಲಾಗುತ್ತಿದೆ. ಗಣ್ಯ ವ್ಯಕ್ತಿಗಳು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ನೆರವು ನೀಡಿದ್ದು, ಯಾವುದೇ ಆಧಾರ ಇಲ್ಲದೆ ಆರೋಪ ಮಾಡಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್​​ ಖಾತೆ ಮೂಲಕ ಮಾಡಿತ್ತು. ಇದರಿಂದ ಚಿತ್ರಹಳ್ಳಿ ಗೇಟ್ ಪೊಲೀಸ್​ ಠಾಣೆಯಲ್ಲಿ ಸೋನಿಯಾಗಾಂಧಿ ಹಾಗೂ ಇತರರ ವಿರುದ್ಧ ದೂರು ನೀಡಿರುವುದಾಗಿ ಹೇಳಿದರು.

ಈಗಾಗಲೇ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರರನ್ನು ಆರೋಪಿಯಾಗಿ ಪರಿಗಣಿಸಿ ತನಿಖೆ ಮುಂದುವರೆಸಲು ಹೊಳಲ್ಕೆರೆ ಜೆಎಂಎಫ್​ಸಿ ಕೋರ್ಟ್‌ಗೆ ಪೊಲೀಸರು ಅನುಮತಿ ಕೋರಿ ಮನವಿ ಸಲ್ಲಿಸಿದ್ದಾರೆ ಎಂದು ವಕೀಲ ಧನಂಜಯ್ ಅವರು​ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details