ಕರ್ನಾಟಕ

karnataka

ETV Bharat / state

ಅನುಮತಿ ಪಡೆಯದೆ ಬಂದಿರುವ ಸೋಂಕಿತನ ವಿರುದ್ದ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ

ಚಿತ್ರದುರ್ಗ ಜಿಲ್ಲಾಡಳಿತದ ಅನುಮತಿಯಿಲ್ಲದೇ ಊರೂರು ಸುತ್ತಿದ್ದ ಚೆನ್ನೈನಿಂದ ಬಂದ ಕೊರೊನಾ ಸೋಂಕಿತನ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

case against corona positive patient in chitradurga
ಸೋಂಕಿತನ ವಿರುದ್ದ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ

By

Published : May 17, 2020, 3:07 PM IST

ಚಿತ್ರದುರ್ಗ: ಅನುಮತಿ ಪಡೆಯದೆ ಹೊರರಾಜ್ಯದಿಂದ ಬಂದಿರುವ ಸೋಂಕಿತ ಪಿ-994 ವ್ಯಕ್ತಿ ವಿರುದ್ದ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.

ಸೋಂಕಿತನ ವಿರುದ್ದ ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ


ಜಿಲ್ಲೆಗೆ ಆತಂಕ ತಂದೊಡ್ಡಿದ ಕೊರೊನಾ ಸೋಂಕಿತ P-994 ವ್ಯಕ್ತಿ ಯಾವುದೇ ರಾಜ್ಯದ ಅನುಮತಿ ಪಡೆಯದೆ ಪತ್ನಿ, ಮಗಳು ಮತ್ತು 20ದಿವಸದ ಮಗುವಿನ ಜೊತೆ ಕುಟುಂಬ ಸಮೇತ ಚನ್ನೈನಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿಗೆ ಬಂದಿದ್ದ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೂ ಮಾಹಿತಿ ನೀಡದ ಪಿ-994 ಕಳೆದ ಮೇ 05 ರಂದು ಸ್ವಗ್ರಾಮಕ್ಕೆ ಹಿಂದುರಿಗಿ ಮೇ 10ರವರೆಗೆ ಸುಮಾರು 10 ಗ್ರಾಮಗಳಿಗೆ ಭೇಟಿ ನೀಡಿ ಮನಸೋ ಇಚ್ಚೆ ಸುತ್ತಾಟ ನಡೆಸಿದ್ದ.


ಜಿಲ್ಲೆಯ ತಳಕು, ಚಿಕ್ಕ ಹಳ್ಳಿ, ಬೇಡರೆಡ್ಡಿಹಳ್ಳಿ, ಹಿರೇಹಳ್ಳಿ, ಮನ್ನೇಕೋಟೆ, ಕೋನಸಾಗರ, ಸಿದ್ದಾಪುರ, ರಾಯದುರ್ಗ ಸೇರಿದಂತೆ ಚಳ್ಳಕೆರೆ ನಗರಕ್ಕೂ ಭೇಟಿ ನೀಡಿದ್ದಾನೆ. ಈ ಸೋಂಕಿತನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 46 ಜನರನ್ನು ಜಿಲ್ಲಾಡಳಿತ ಪತ್ತೆ ಹಚ್ಚಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತ, ಯಾವುದೇ ರಾಜ್ಯದ ಅನುಮತಿ ಪಡೆಯದೆ ಬಂದಿರು ಸೋಂಕಿತ ಪಿ- 994 ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ಕಲಂ 188 ಹಾಗು ಪ್ರಾಕೃತಿಕ ವಿಕೋಪ ಕಾಯ್ದೆ 51 ರಿಂದ 60 ರ ಅಡಿ ಪ್ರಕರಣ ದಾಖಲಿಸಿದೆ. ಸದ್ಯ ಸೋಂಕಿತ ವ್ಯಕ್ತಿ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ABOUT THE AUTHOR

...view details