ಚಿತ್ರದುರ್ಗ:ತೀವ್ರ ಬರಗಾಲದಿಂದ ಬೇಸತ್ತಿದ್ದ ಬರದನಾಡು ಚಿತ್ರದುರ್ಗದ ರೈತರ ಮೇಲೆ ಈ ಬಾರಿಯು ಮುಂಗಾರು ಮಳೆ ಮುನಿಸಿಕೊಂಡಿದೆ. ಮಳೆ ಇಲ್ಲದೆ ರೈತರು ಹೈರಾಣಾಗಿದ್ದಾರೆ. ಅದರೆ ಅ ಭಾಗದ ಮಹಾತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಏತನೀರವಾರಿ ಯೋಜನೆ ಮಾತ್ರ ಕುಂಠಿತಗೊಂಡಿದೆ.
ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತನ್ನಿ: ಕೋಟೆನಾಡಿನ ರೈತರ ಅಳಲು
ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಘೋಷಣೆ ಮಾಡಿದ್ದ ನೀರಾವರಿ ಯೋಜನೆ ಘೋಷಣೆಯಾಗಿಯೇ ಉಳಿದಿದೆ ವಿನಾ ಅನುಷ್ಠಾನಕ್ಕೆ ಮಾತ್ರ ಬಂದಿಲ್ಲ.
ದಾವಣೆಗೆರೆ ಸೇರಿದಂತೆ ಜಿಲ್ಲೆಯ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕು ವ್ಯಾಪ್ತಿಯಲ್ಲಿ ಬರುವ 16 ಕೆರೆಗಳನ್ನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ತುಂಬಿಸಲು 2017ರಲ್ಲೇ ಅನುಮೊದನೆ ನೀಡಿ ಹಣವನ್ನೂ ಬಿಡುಗಡೆ ಮಾಡಲಾಗಿತ್ತು. ಆದರೆ ಆಡಳಿತಾತ್ಮಕ ಮಂಜೂರು ಸಿಗದ ಕಾರಣ ರೈತರ ಕನಸು ಕನಸಾಗಿಯೇ ಉಳಿದಿದೆ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಸಂಘಟಿತರಾಗಿರುವ ಸುಮಾರು 45 ಗ್ರಾಮಗಳ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಸರ್ಕಾರಕ್ಕೆ ತಮ್ಮ ಅಳಲು ತೋಡಿಕೊಂಡರು.
ರೈತರ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಆರಂಭದಿಂದಲೂ ಮುರುಘಾ ಮಠ ನೀರಾವರಿ ಹೋರಾಟದ ಮುಂಚೂಣಿ ವಹಿಸಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿತ್ತು. ಆದ್ರೆ ಮಂದಗತಿಯ ಕಾಮಗಾರಿಯಿಂದಾಗಿ ನೀರಿನ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ. ಸರ್ಕಾರ ಎರಡನೇ ಹಂತದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕರೆಗಳನ್ನು ತುಂಬಿಸುವ ವಿಶ್ವಾಸವಿದೆ. ಒಂದು ವೇಳೆ ನಂಬಿಕೆ ಹುಸಿಯಾದ್ರೆ ಹೋರಾಟ ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.