ಕರ್ನಾಟಕ

karnataka

ETV Bharat / state

ಬಿಹಾರದಿಂದ ಭೀಮಸಮುದ್ರ ಗ್ರಾಮಕ್ಕೆ ಬಂದ 5 ಜನ.. ಭಯ ಬೇಡ, ಮುನ್ನೆಚ್ಚರಿಕೆ ಇರಲಿ..

ಕೊರೊನಾ ವೈರಸ್ ಹರಡುವ ಬಗೆ, ರೋಗ ಲಕ್ಷಣಗಳು, ತಡೆಗಟ್ಟುವ ವಿಧಾನದ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು. ಮುಂಜಾಗ್ರತೆ ವಹಿಸುವುದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸದ್ಯದ ಸ್ಥಿತಿಯಲ್ಲಿ ಸೋಂಕು ತಡೆಗೆ ಇರುವ ಸಾಧನ. ಹಾಗಾಗಿ ಭಯ ಬೇಡ.

Chitradurgha
Chitradurgha

By

Published : Jun 10, 2020, 2:38 PM IST

ಚಿತ್ರದುರ್ಗ: ಬಿಹಾರದಿಂದ ಭೀಮಸಮುದ್ರ ಗ್ರಾಮಕ್ಕೆ ಐದು ಮಂದಿ ಆಗಮಿಸಿದ್ದಾರೆ. ಇದರಿಂದಾಗಿ ಇಡೀ ಊರಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮಕ್ಕೆ ಆಗಮಿಸಿದ ಕುಟುಂಬವೊಂದರ ಐದು ಜನರನ್ನು ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಹೋಮ್ ಕ್ವಾರಂಟೈನ್ ಮಾಡಿದ್ದಾರೆ. ಅದರೂ ಸಹ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಈ ಬಗ್ಗೆ ಮಾತನಾಡಿರುವ ಭೀಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಾದಿಕ್‍ವುಲ್ಲಾ, ಕೊರೊನಾ ವೈರಸ್ ಸೋಂಕಿಗೆ ಒಳಗಾಗದಂತೆ ಸದ್ಯದ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಬದುಕು ನಡೆಸುವುದು ಅನಿವಾರ್ಯ.

ಕೊರೊನಾ ವೈರಸ್ ಹರಡುವ ಬಗೆ, ರೋಗ ಲಕ್ಷಣಗಳು, ತಡೆಗಟ್ಟುವ ವಿಧಾನದ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಬೇಕು. ಮುಂಜಾಗ್ರತೆ ವಹಿಸುವುದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸದ್ಯದ ಸ್ಥಿತಿಯಲ್ಲಿ ಸೋಂಕು ತಡೆಗಟ್ಟಲು ಇರುವ ಸಾಧನ ಎಂದರು.

ABOUT THE AUTHOR

...view details