ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್ಗೆ ಸಂಬಂಧಿಸಿದಂತೆ ಇಂದು 48 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 625 ಕ್ಕೆ ಏರಿಕೆಯಾಗಿದೆ.
ಚಿತ್ರದುರ್ಗ: 48 ಜನರಿಗೆ ಕೊರೊನಾ ಪಾಸಿಟಿವ್.. ಸೋಂಕಿತರ ಸಂಖ್ಯೆ 625 ಕ್ಕೆ ಏರಿಕೆ - Chitradurga
ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಇಂದು 48 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಚಿತ್ರದುರ್ಗ
ತಾಲ್ಲೂಕಿನಲ್ಲಿ 13, ಹೊಳಲ್ಕೆರೆ-05, ಹಿರಿಯೂರು-09, ಚಳ್ಳಕೆರೆ-08, ಹೊಸದುರ್ಗ-08 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 05 ಸೇರಿದಂತೆ ಒಟ್ಟು 48 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 474 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ. ವರದಿಯಲ್ಲಿ 48 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 625 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 14 ಜನ ಮೃತಪಟ್ಟಿದ್ದಾರೆ.
ಇನ್ನು ಸೋಂಕಿತರ ಪೈಕಿ ಈಗಾಗಲೆ 198 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 415 ಸಕ್ರಿಯ ಪ್ರಕರಣಗಳು ಇವೆ.