ಕರ್ನಾಟಕ

karnataka

ETV Bharat / state

ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ : ಅಭಿಪ್ರಾಯ ವ್ಯಕ್ತಪಡಿಸಿದ ಕೆಲಸಗಾರ ಸತೀಶ್ - ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ

ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ ತಿಯುತ್ತಿದಂತೆ ಬೆಂಗಳೂರಿನ ಲ್ಯಾವೇಲು ರೋಡ್​ನಲ್ಲಿರುವ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿರುವ ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೆಲಸಗಾರ ಸತೀಶ್

By

Published : Jul 30, 2019, 5:15 PM IST

ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರ ತಿಳಿಯುತ್ತಿದಂತೆ ಬೆಂಗಳೂರಿನ ಲ್ಯಾವೇಲು ರೋಡ್​ನಲ್ಲಿರುವ ಕಾಫಿ ಡೇನಲ್ಲಿ ಕೆಲಸ ಮಾಡುತ್ತಿರುವ ಸತೀಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ದಾರ್ಥ ಹೆಗ್ಡೆ ನಾಪತ್ತೆ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಕೆಲಸಗಾರ ಸತೀಶ್

ಸಿದ್ದಾರ್ಥ ಹೆಗ್ಡೆ ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ಕಾಫಿ ಡೇ ಬಂದಾಗ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದರು. ಮಲೆನಾಡು ಭಾಗದವರು ಎಂದರೆ ಅವರಿಗೆ ವಿಶೇಷ ಪ್ರೀತಿ. ಆದರೆ, ಈ ರೀತಿಯ ಘಟನೆ ನಮಗೆ ತಿಳಿಯುತ್ತಿದ್ದಂತೆ ತುಂಬಾ ನೋವಾಗಿದೆ. ಸಾವಿರಾರು ಯುವಕರಿಗೆ ಉದ್ಯೋಗ ನೀಡುತ್ತಿದ್ದು, ಯಾವಾಗಲೂ ಸಂತೋಷದಿಂದ ಮಾತನಾಡುತ್ತಿದ್ದರು.

ಅವರು ತುಂಬಾ ಸಾಧನೆ ಮಾಡಿದ್ದಾರೆ. ಅವರ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ಬ್ರಾಂಡೆಡ್​ ವಾಚ್ ಹಾಗೂ ಬಟ್ಟೆ ಹಾಕುತ್ತಿದ್ದರು. ಆದರೆ, ಅವರು ತುಂಬಾ ಸಿಂಪಲ್ ಆಗಿ ಇರುತ್ತಿದ್ದರು ಎಂದರು.

ಅವರು ಮರಳಿ ಬರಬೇಕು ಅವರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು, ಬೇರೆ ಕಾರಿನಲ್ಲಿ ಹತ್ತಿ ಹೋಗಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಬೇಗ ಬರಲಿ ಎಂದು ಬೇಡಿಕೊಂಡರು.

ABOUT THE AUTHOR

...view details