ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ: 3 ದಿನದ ಬಳಿಕ ಶವ ಪತ್ತೆ

ಜಯಮ್ಮ ಕಾಣೆಯಾಗಿರುವ ಕುರಿತು ಅವರ ಕುಟುಂಬ ಸದಸ್ಯರು ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಜಯಮ್ಮನ ಮೃತದೇಹ ಇಂದು ನಾಲೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತರೀಕೆರೆ ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.

women-suicide-for-family-distress-in-chikkamagalore
ಕೌಟುಂಬಿಕ ಕಲಹಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ

By

Published : Jan 12, 2021, 6:07 PM IST

ಚಿಕ್ಕಮಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಕಳೆದ 3 ದಿನಗಳ ಹಿಂದೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆಯ ಶವ ಇಂದು ಭದ್ರಾ ನಾಲೆಯಲ್ಲಿ ಪತ್ತೆಯಾಗಿದೆ.

ತರೀಕೆರೆ ತಾಲೂಕಿನ ಕೋಡಿಹಳ್ಳಿ ಕ್ಯಾಂಪ್​ ನಿವಾಸಿ ಜಯಮ್ಮ (43) 3 ದಿನಗಳ ಹಿಂದೆ ತಾಲೂಕಿನ ಗಾಳಿಹಳ್ಳಿ ಕ್ರಾಸ್ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸತತ ಮೂರು ದಿನಗಳಿಂದ ಶವಕ್ಕಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಇದೀಗ ಮೃತದೇಹ ಪತ್ತೆಯಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಶವ ಮೇಲೆತ್ತಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ.

ಜಯಮ್ಮ ಕಾಣೆಯಾಗಿರುವ ಕುರಿತು ಅವರ ಕುಟುಂಬ ಸದಸ್ಯರು ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ತರೀಕೆರೆ ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿ, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿ ಮಗ!

ABOUT THE AUTHOR

...view details