ಚಿಕ್ಕಮಗಳೂರು : ಅಪಘಾತದಲ್ಲಿ ತಲೆ ಮೇಲೆ ಅಗ್ನಿಶಾಮಕ ವಾಹನ ಹರಿದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.
ರಸ್ತೆ ಅಪಘಾತ : ತಲೆಯ ಮೇಲೆ ಅಗ್ನಿಶಾಮಕ ವಾಹನ ಚಕ್ರ ಹರಿದು ಮಹಿಳೆ ಸಾವು - woman died in road accident in koppa
ತಲೆ ಮೇಲೆ ಅಗ್ನಿಶಾಮಕ ವಾಹನ ಹರಿದು ಮಹಿಳೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..
ಅಗ್ನಿಶಾಮಕ ವಾಹನ ಚಕ್ರ ಹರಿದು ಮಹಿಳೆ ಸಾವು
ಮೃತ ಮಹಿಳೆಯನ್ನು ಮುಮ್ತಾಜ್ (46) ಎಂದು ಗುರುತಿಸಲಾಗಿದೆ. ಪಟ್ಟಣದ ದ್ಯಾವೇಗೌಡ ವೃತ್ತದಿಂದ ವಾಟರ್ ಟ್ಯಾಂಕ್ ವೃತ್ತದ ಕಡೆಗೆ ಅಗ್ನಿ ಶಾಮಕದ ದಳ ವಾಹನ ಸಾಗುತ್ತಿತ್ತು. ಈ ವೇಳೆ ತಿರುವಿನಲ್ಲಿ ವಾಹನದ ಬೈಕ್ಗೆ ಡಿಕ್ಕಿಯಾಗಿದೆ.
ಬೈಕ್ ಅಗ್ನಿಶಾಮಕ ವಾಹನ ಅಪಘಾತ :ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಅಗ್ನಿಶಾಮಕ ವಾಹನದ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
TAGGED:
ಬೈಕ್ ಅಗ್ನಿಶಾಮಕ ವಾಹನ ಅಪಘಾತ