ಚಿಕ್ಕಮಗಳೂರು:ಜಿಲ್ಲೆಯಲ್ಲಿ ರಾತ್ರಿ ವೇಳೆ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಕಾಡಾನೆ ಪ್ರತ್ಯಕ್ಷ: ಭಯಬೀತರಾದ ದಾರಿಹೋಕರು
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿತ್ತು.
ಕಾಡಾನೆ
ಮೂಡಿಗೆರೆ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪ್ರಮುಖ ರಸ್ತೆಯಲ್ಲಿ ಗಜರಾಜ ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ದಾರಿಹೋಕರು ಆತಂಕಗೊಂಡಿದ್ದಾರೆ. ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲಿ ಈ ಆನೆ ಠಿಕಾಣಿ ಹೂಡಿದ್ದು, ಅತ್ತ ಇತ್ತ ಹೋಗದೆ ಅಲ್ಲೇ ನಿಂತುಕೊಂಡಿತ್ತು.
ಆನೆ ಎಲ್ಲೂ ಹೋಗದ ಕಾರಣ ರಸ್ತೆಯಲ್ಲಿಯೇ ಸ್ಥಳೀಯರು ಉಳಿದಿದ್ದು ಕಾಡಾನೆ ಅರಣ್ಯಕ್ಕೆ ತೆರಳಿದ ನಂತರ ದಾರಿಹೋಕರು ತಮ್ಮ ಪ್ರಯಾಣ ಬೆಳೆಸಿದ್ದಾರೆ.