ಚಿಕ್ಕಮಗಳೂರು: ನಮ್ಮ ಪಕ್ಷದಲ್ಲೂ ತುಂಬಾ ಜನ ಸಿನಿಯರ್ಸ್ ಇದ್ದು, ಅಸಮಾಧಾನ ಕಂಡುಬರೋದು ಸಾಮಾನ್ಯ. ಅಧಿಕಾರ ಕೊಟ್ಟು ಎಲ್ಲರಿಗೂ ಸಮಾಧಾನ ಮಾಡೋಕೆ ಆಗದೇ ಇರಬಹುದು. ಆದ್ರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮಾಧಾನ ಮಾಡೋ ಕೆಲಸವನ್ನು ಪಾರ್ಟಿ ಹಿಂದೆಯೂ ಮಾಡಿದೆ. ಮುಂದೆಯೂ ಮಾಡುತ್ತೆ. ನಮ್ಮದು ಶೂನ್ಯದಿಂದ ಬೆಳೆದ ಪಾರ್ಟಿ, ಸಂದರ್ಭ ಬಂದ್ರೆ ಯಾವ ಪರಿಸ್ಥಿತಿಯನ್ನೂ ಬೇಕಾದರೂ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ರು.
ಸಂದರ್ಭ ಬಂದ್ರೆ ಯಾವ ಪರಿಸ್ಥಿತಿಯನ್ನಾದ್ರೂ ಎದುರಿಸುತ್ತೇವೆ: ಸಿ ಟಿ ರವಿ
ಬಿಜೆಪಿ ಪಾಳಯದಲ್ಲಿ ಎದ್ದಿರುವ ಅಸಮಾಧಾನದ ಕುರಿತು ಸಚಿವ ಸಿ ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಸ್ವಾಭಾವಿಕವಾಗಿ ತುಂಬಾ ಜನ ಸಿನಿಯರ್ ಗಳು ಇದ್ದಾಗ ಅಸಮಾಧಾನ ಇರುತ್ತೆ. ಅಧಿಕಾರ ಕೊಟ್ಟು ಎಲ್ಲರಿಗೂ ಸಮಾಧಾನ ಮಾಡೋಕೆ ಆಗದೇ ಇರಬಹುದು. ಆದರೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1985 ರಲ್ಲಿ ಯಡಿಯೂರಪ್ಪನವರು ಒಬ್ಬರೇ ಬಿಜೆಪಿ ಶಾಸಕರಾಗಿದ್ದರು. 1984 ರಲ್ಲಿ ಎಲ್ ಕೆ ಅಡ್ವಾಣಿ, ವಾಜಪೇಯಿ ಕೂಡ ಸೋತಿದ್ದರು. ದೇಶದಲ್ಲಿ ನಮಗೆ ಸಿಕ್ಕಿದ್ದೇ ಎರಡು ಸೀಟು. ಆದರೂ ನಾವು ವಿಚಲಿತರಾಗಿರಲಿಲ್ಲ. ಅಂದು ನಮ್ಮ ಪಾರ್ಟಿ ಬಾಗಿಲು ಹಾಕಲಿಲ್ಲ. ಹಾಗಾಗಿಯೇ ಇಂದು ಪಾರ್ಟಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದರು.
ಯೋಗ - ಯೋಗ್ಯತೆಯ ಕುರಿತು ಪ್ರತಿಕ್ರಿಯಿಸಿದ ಸಿ ಟಿ ರವಿಯವರು, ಯೋಗ್ಯತೆ ಇರೋರು ತುಂಬಾ ಜನ ಇದ್ದಾರೆ. ಈಗ ಅವಕಾಶ ಸಿಕ್ಕಿರೋದು ಯೋಗ ಇದ್ದೋರಿಗೆ ಮಾತ್ರ. ಮುಂದೆ ನಿಮಗೂ ಯೋಗ ಕೂಡಿ ಬಂದಾಗ ಬಡ್ಡಿ ಸಮೇತ ಸಿಗುತ್ತೆ ಎಂದು ಹೇಳಿದ್ದೇನೆ ಸ್ಪಷ್ಟನೆ ನೀಡಿದರು.