ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಶೃಂಗೇರಿ ಲೋಕಾಯುಕ್ತದಲ್ಲಿ ಕೊಪ್ಪ ತಾಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ವಿಜಯಾನಂದ ಅವರು ಟಿ ಡಿ ರಾಜೇಗೌಡ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದರು. ಆಸ್ತಿ ಖರೀದಿಯಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ದೂರಿದ್ದರು. ಇದೀಗ ತಾವು ಕೊಟ್ಟಿರುವ ದೂರು ಹಿಂಪಡೆಯುವುದಾಗಿ ಹೇಳಿದ್ದಾರೆ.
ದಿವಂಗತ ಸಿದ್ಧಾರ್ಥ್ ಒಡೆತನದ ಕಾಫಿತೋಟವನ್ನು ಟಿ.ಡಿ ರಾಜೇಗೌಡ ಖರೀದಿ ಮಾಡಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್ ಅವರ ಆಮಿಷಕ್ಕೊಳಗಾಗಿ ನಾನು ದೂರು ನೀಡಿದ್ದೆ. ಜೀವರಾಜ್ ಅವರು ದೂರಿನ ವಿವರಣೆ ಅಥವಾ ಪ್ರತಿಯನ್ನಾಗಲಿ ನನಗೆ ತೋರಿಸಿಲ್ಲ. ಅವರ ಆಸ್ತಿ ಖರೀದಿ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ವಿಜಯಾನಂದ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.