ಚಿಕ್ಕಮಗಳೂರು:ಲಾಂಗ್ ತೋರಿಸಿ ಹಾಡಹಗಲೇ ಚಿನ್ನದ ಅಂಗಡಿಯಲ್ಲಿ ಮೂರು ಸರಗಳನ್ನು ಕದ್ದು ವ್ಯಕ್ತಿ ಪರಾರಿ ಆಗಿರುವ ಘಟನೆ ಜಿಲ್ಲೆಯ ಶೃಂಗೇರಿ ನಗರದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಶೃಂಗೇರಿಯಲ್ಲಿ ಹಾಡಹಗಲೇ ಲಾಂಗ್ ತೋರಿಸಿ ಚಿನ್ನ ಕದ್ದ ಖದೀಮ - ವಿಡಿಯೋ - Chikkamagaluru Gold Store Theft
ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ದರೋಡೆಕೋರ, ಲಾಂಗ್ ತೋರಿಸಿ ಅಂಗಡಿಯಲ್ಲಿದ್ದ ಮಹಿಳಾ ಕೆಲಸಗಾರರನ್ನು ಬೆದರಿಸಿ ಮೂರು ಚೈನ್ ಕದ್ದು ಪರಾರಿಯಾಗಿದ್ದಾನೆ.
ಲಾಂಗ್ ತೋರಿಸಿ ಚಿನ್ನ ಕದ್ದ ಖದೀಮ
ನಾಗಪ್ಪ ಶೆಟ್ಟಿ ಎಂಬುವರ ಬಂಗಾರದ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದ ದರೋಡೆಕೋರ, ಲಾಂಗ್ ತೋರಿಸಿ ಅಂಗಡಿಯಲ್ಲಿದ್ದ ಮಹಿಳಾ ಕೆಲಸಗಾರರನ್ನು ಬೆದರಿಸಿ ಮೂರು ಚೈನ್ ಕದ್ದು ಪರಾರಿಯಾಗಿದ್ದಾನೆ.
ಈ ವೇಳೆ ದರೋಡೆಕೋರನ ಮೇಲೆ ಚೇರ್ಗಳಿಂದ ಅಂಗಡಿಯಲ್ಲಿದ್ದ ಸಿಬ್ಬಂದಿ ಚೇರ್ನಿಂದ ಹಲ್ಲೆ ಮಾಡಿದ್ದು, ಆತ ಲಾಂಗ್ ಹಾಗೂ ಬ್ಯಾಗ್ ಬಿಟ್ಟು ಚೈನ್ನೊಂದಿಗೆ ಪರಾರಿಯಾಗಿದ್ದಾನೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 12, 2020, 4:40 PM IST