ಕರ್ನಾಟಕ

karnataka

ETV Bharat / state

ಮನೆಯಲ್ಲಿ ವಾಸವಿದ್ದ ಕಾಳಿಂಗ ಸರ್ಪ: ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಉರಗ ತಜ್ಞ ರಿಜ್ವಾನ್​​ - The Kalinga Serpent

ಮನೆಯೊಳಗಿನ ಹಟ್ಟದ ಮೇಲೆಯೇ ಮನೆ ಮಾಡಿಕೊಂಡು ಹಲವು ದಿನಗಳಿಂದ ವಾಸವಾಗಿ ಸಂಚಾರ ನಡೆಸುತ್ತಿದ್ದ ಮರಿ ಕಾಳಿಂಗ ಸರ್ಪವನ್ನು ಚಿಕ್ಕಮಗಳೂರಿನಲ್ಲಿ ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಣೆ ಮಾಡಲಾಗಿದೆ.

ಕಾಳಿಂಗ ಸರ್ಪ
ಕಾಳಿಂಗ ಸರ್ಪ

By

Published : Dec 2, 2020, 10:03 PM IST

ಚಿಕ್ಕಮಗಳೂರು: ಮನೆಯೊಳಗಿನ ಅಟ್ಟದ ಮೇಲೆಯೇ ಮನೆ ಮಾಡಿಕೊಂಡು ಹಲವು ದಿನಗಳಿಂದ ವಾಸವಾಗಿ ಸಂಚಾರ ನಡೆಸುತ್ತಿದ್ದ ಮರಿ ಕಾಳಿಂಗ ಸರ್ಪವನ್ನು ಚಿಕ್ಕಮಗಳೂರಿನಲ್ಲಿ ಸುರಕ್ಷಿತವಾಗಿ ಸೆರೆ ಹಿಡಿದು ರಕ್ಷಣೆ ಮಾಡಲಾಗಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಂದಿಹಡ್ಲು ಗ್ರಾಮದ ಸುಜಯ್ ಭಟ್ ಎಂಬುವರ ಮನೆಯಲ್ಲಿ ಬರೋಬ್ಬರಿ 8 ಅಡಿ ಉದ್ದದ ಮರಿ ಕಾಳಿಂಗ ಸರ್ಪ ಕಳೆದ ಹಲವು ದಿನಗಳಿಂದ, ಮನೆಯ ಅಟ್ಟದ ಮೇಲೆ ವಾಸವಾಗಿತ್ತು. ಇದನ್ನು ಗಮನಿಸಿದ ಮನೆ ಸದಸ್ಯರು ಇಂದಲ್ಲ ನಾಳೆ ಹೋಗಬಹುದು ಎಂದು ಸುಮ್ಮನಿದ್ದರು. ಆದರೆ, ಈ ಮರಿ ಕಾಳಿಂಗ ಸರ್ಪದ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಮನೆಯೊಳಗೆ ಹಾಗೂ ಮನೆಯ ಅಟ್ಟದ ಸಂಪೂರ್ಣ ಸಂಚಾರ ನಡೆಸಿದೆ.

ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಉರಗ ತಜ್ಞ ರಿಜ್ವಾನ್​​

ಇದರಿಂದ ಆತಂಕಕ್ಕೊಳಗಾದ ಮನೆಯ ಸದಸ್ಯರು ಕೂಡಲೇ ಕಳಸದ ಉರಗ ತಜ್ಞ ರಿಜ್ವಾನ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸತತ ಎರಡು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ನಂತರ ಕಳಸ ಅರಣ್ಯ ಸಿಬ್ಬಂದಿ ಸಮ್ಮುಖದಲ್ಲಿ ಕುದುರೆ ಮುಖದ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ABOUT THE AUTHOR

...view details