ಕರ್ನಾಟಕ

karnataka

ETV Bharat / state

ದತ್ತ ಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ಆರೋಪ : ಕಿಡಿಗೇಡಿಗಳನ್ನು ಬಂಧಿಸುವಂತೆ ಮುತಾಲಿಕ್ ಆಗ್ರಹ - ಪ್ರಮೋದ್​ ಮುತಾಲಿಕ್

ದತ್ತಮಾಲಾಧಿರಿಗಳ ಮೇಲೆ ಕೋಲಾರದಲ್ಲಿ ನಡೆದ ಕಲ್ಲು ತೂರಾಟ (Stone pelting) ಹಿನ್ನೆಲೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್, ಕಲ್ಲು ತೂರಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ..

stone-pelting-at-datta-maladhari-travelling-bus
ಪ್ರಮೋದ್​ ಮುತಾಲಿಕ್

By

Published : Nov 14, 2021, 3:09 PM IST

Updated : Nov 14, 2021, 7:33 PM IST

ಚಿಕ್ಕಮಗಳೂರು :ಕೋಲಾರದಲ್ಲಿ (Datta Maladhari) ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ (Stone pelting) ನಡೆಸಿದ ಆರೋಪ ಕೇಳಿ ಬಂದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದತ್ತ ಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪ ಕುರಿತಂತೆ ಮುತಾಲಿಕ್​ ಆಕ್ರೋಶ ವ್ಯಕ್ತಪಡಿಸಿರುವುದು..

ಭಜನೆ ಮಾಡಿಕೊಂಡು ಬರುವಾಗ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕಿಡಿಗೇಡಿಗಳನ್ನ ಕೂಡಲೇ ಬಂಧಿಸಬೇಕು. ದಾದಾಗಿರಿ, ತಾಲಿಬಾನೀಕರಣ ಇಲ್ಲಿ ನಡೆಯೋದಿಲ್ಲ. ಹಲ್ಲೆ ಪ್ರವೃತ್ತಿ ನಿಲ್ಲಿಸದಿದ್ರೆ ಒದಿತ್ತೀವಿ ಅಂತಾ ಮುತಾಲಿಕ್ (Pramod Muthalik)​​​​ ಎಚ್ಚರಿಕೆ ನೀಡಿದರು.

ಅವರನ್ನು ಹದ್ದು ಬಸ್ತಿನಲ್ಲಿಡುವಂತೆ ಜಿಲ್ಲಾಧಿಕಾರಿಗಳಿಗೆ ಹೇಳ್ತೀನಿ. ದತ್ತಮಾಲಾ ಅಭಿಯಾನಕ್ಕೆ ಸೂಕ್ಷ್ಮ ಪ್ರದೇಶದಲ್ಲಿ ರಕ್ಷಣೆ ಯಾಕೆ ಕೊಡಲಿಲ್ಲ?. ಮುಖ್ಯಮಂತ್ರಿ, ಗೃಹಸಚಿವರಿಗೆ ಹೇಳ್ತಾ ಇದ್ದೀನಿ ಕೂಡಲೇ ಅವ್ರನ್ನ ಬಂಧಿಸಬೇಕು. ಬಂಧಿಸದಿದ್ರೆ ನಾನೇ ನಾಳೆ ಕೋಲಾರಕ್ಕೆ ಹೋಗುವುದಕ್ಕೆ ನಿಶ್ಚಿತ ಮಾಡಿದ್ದೇನೆ‌ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ಶಾರದಾ ಮಠದ ಮುಂಭಾಗ ಪ್ರತಿಭಟನೆ ನಡೆಸಿ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ಜಿಲ್ಲಾ ಎಸ್ಪಿ ಅಕ್ಷಯ್ ಅವರಿಗೆ ಮನವಿ ಸಲ್ಲಿಸಿದರು.

Last Updated : Nov 14, 2021, 7:33 PM IST

ABOUT THE AUTHOR

...view details