ಚಿಕ್ಕಮಗಳೂರು :ಕೊರೊನಾ ವೈರಸ್ ಭೀತಿ ಹಿನ್ನೆಲೆ ವಧು-ವರ ಮಾಸ್ಕ್ ಧರಿಸಿ ಸರಳವಾಗಿ ಮದುವೆಯಾಗಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಸುಶಾಂತ್ ಹಾಗೂ ನಿಶ್ಚಿತಾ ಎಂಬುವರ ವಿವಾಹ ನಗರದ ಚರ್ಚ್ನಲ್ಲಿ ನಿಗದಿಯಾಗಿತ್ತು. ಕೊರೊನಾ ಭೀತಿ ಹಿನ್ನೆಲೆ ಮೂಡಿಗೆರೆಯ ಬಣಕಲ್ ಗ್ರಾಮದ ವಧುವಿನ ಮನೆಯಲ್ಲಿ ಅತ್ಯಂತ ಸರಳವಾಗಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.
ಮಾಸ್ಕ್ ಮಹತ್ವ ಸಾರಿ ಹೇಳಿದ ನವ ವಧು-ವರರು.. ಇದು ಬಲು ವಿಶಿಷ್ಟ ಕಲ್ಯಾಣ
ಕೊರೊನಾ ಭೀತಿ ಹಿನ್ನೆಲೆ ಮೂಡಿಗೆರೆಯ ಬಣಕಲ್ ಗ್ರಾಮದ ವಧುವಿನ ಮನೆಯಲ್ಲಿ ಅತ್ಯಂತ ಸರಳವಾಗಿ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನೆರವೇರಿತು.
ಚಿಕ್ಕಮಗಳೂರು
ಈ ಮದುವೆಯಲ್ಲಿ ಭಾಗವಹಿಸಿದ್ದ ಕುಟುಂಬದ ಎಲ್ಲಾ ಸದಸ್ಯರು ಹಾಗೂ ಈ ನವ ಜೋಡಿ ಮಾಸ್ಕ್ ಧರಿಸಿರೋದು ವಿಶೇಷವಾಗಿತ್ತು. ಅಲ್ಲದೇ ಕಾರ್ಯಕ್ರಮ ಮುಗಿಯುವವರೆಗೂ ನವ ಜೋಡಿ ಮಾಸ್ಕ್ ಧರಿಸುವ ಮೂಲಕ ಮಾಸ್ಕ್‌ನ ಮಹತ್ವ ತಿಳಿಸಿಕೊಟ್ಟಿದ್ದಾರೆ.