ಕರ್ನಾಟಕ

karnataka

ETV Bharat / state

ಸಿದ್ಧಾರ್ಥ್ ​ಮೃತದೇಹ ಪತ್ತೆ.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ - ಬಹುಕೋಟಿ ಉದ್ಯಮಿ ಹಾಗೂಸಿದ್ಧಾರ್ಥ್ ​ಮೃತದೇಹ ಪತ್ತೆ ಮೃತದೇಹ ಪತ್ತೆ

ಜುಲೈ​ 29ರಿಂದ ಕಾಣೆಯಾಗಿದ್ದ ಕೆಫೆ ಕಾಫೀ ಡೇ ಸಂಸ್ಥಾಪಕ ಸಿದ್ಧಾರ್ಥ್​ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸಿದ್ಧಾರ್ಥ್​ ಮೃತದೆಹ ಪತ್ತೆ

By

Published : Jul 31, 2019, 8:18 AM IST

Updated : Jul 31, 2019, 9:21 AM IST

ಚಿಕ್ಕಮಗಳೂರು: ಕಳೆದ 36 ಗಂಟೆಗಳಿಂದ ಕಾಣೆಯಾಗಿದ್ದ ಬಹುಕೋಟಿ ಉದ್ಯಮಿ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಹೆಗ್ಡೆ ಮೃತದೇಹ ಪತ್ತೆಯಾಗಿದೆ.

ಕುಟುಂಬಸ್ಥರ ಆಕ್ರಂದನ

ಮಂಗಳೂರಿನ ನೇತ್ರಾವತಿ ಸೇತುವೆ ಮೇಲಿಂದ ಕಾಣೆಯಾಗಿ ಎರಡೂ ದಿನ ಕಳೆದಿತ್ತು. ಅವರು ನದಿಯಲ್ಲಿ ಬಿದ್ದಿರಬಹುದು ಎಂಬ ಶಂಕೆಯಿಂದಾ ನೂರಾರು ಈಜು ತಜ್ಞರು ಹಾಗೂ ಮೀನುಗಾರರು ನೇತ್ರಾವತಿ ನದಿಯಲ್ಲಿ ಹುಡುಕಾಟ ನಡೆಸಿದ್ದರು.

ನದಿಯಲ್ಲಿ ಬಿದ್ದು ಮೃತ ಪಟ್ಟಿರೋದು ಸತ್ಯವಾಗಿದ್ದು, ನಿರಂತರ ಹುಡುಕಾಟದ ಪರಿಶ್ರಮವಾಗಿ ಮೃತ ದೇಹ ಪತ್ತೆಯಾಗಿದೆ. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಚೇತನಹಳ್ಳಿಯಲ್ಲಿ ಸ್ನೇಹಿತರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಅವರ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೂಡ ನಮ್ಮ ಪ್ರಾರ್ಥನೆ ದೇವರಿಗೆ ಮುಟ್ಟಲಿಲ್ಲವಲ್ಲ ಎಂದು ಮೌನಕ್ಕೆ ಶರಣಾಗಿದ್ದಾರೆ.

ಕಾಫಿ ತೋಟದ ಕಾರ್ಮಿಕರಿಗೆ ರಜೆ

ಸಿಸಿಡಿ ಮಾಲೀಕ ಸಿದ್ಧಾರ್ಥ್​ ಗೌರವಾರ್ಥವಾಗಿ ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದಿಂದ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಇಂದಿನ ಎಲ್ಲ ವ್ಯವಹಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಕಾಫಿ ತೋಟದ ಕಾರ್ಮಿಕರಿಗೆ ರಜೆ ನೀಡಲು ನಿರ್ಧರಿಸಲಾಗಿದೆ.

Last Updated : Jul 31, 2019, 9:21 AM IST

ABOUT THE AUTHOR

...view details