ಚಿಕ್ಕಮಗಳೂರು :ಉದ್ಯಮಿ ದಿ. ವಿ ಜಿ ಸಿದ್ದಾರ್ಥ್ ಹೆಗ್ಡೆ ತಂದೆ ಗಂಗಯ್ಯ ಹೆಗ್ಡೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಅವಕಾಶ ಕಲ್ಪಿಸಲಾಗಿದೆ.ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ 12 ಗಂಟೆವರೆಗೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರು ದರ್ಶನ ಮಾಡಬಹುದು.
ಇಹಲೋಕ ತ್ಯಜಿಸಿದ ವಿ ಜಿ ಸಿದ್ಧಾರ್ಥ್ ತಂದೆ.. ಸಾರ್ವಜನಿಕರಿಂದ ಅಂತಿಮ ದರ್ಶನ - chetanahalli estate
ಉದ್ಯಮಿ ದಿ.ಸಿದ್ದಾರ್ಥ ಹೆಗ್ಡೆಯ ತಂದೆ ಗಂಗಯ್ಯ ಹೆಗ್ಡೆ ನಿನ್ನೆ ವಿಧಿವಶರಾಗಿದ್ದಾರೆ. ಇಂದು ಚಿಕ್ಕಮಗಳೂರಿನಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಇಂದು ಸ್ವಗ್ರಾಮ ಚೇತನಹಳ್ಳಿ ಎಸ್ಟೇಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಸಿದ್ದಾರ್ಥ್ ಅಂತ್ಯಕ್ರಿಯೆ ನಡೆಸಿದ್ದ ಸ್ಥಳದ ಪಕ್ಕದಲ್ಲಿಯೇ ಗಂಗಯ್ಯ ಹೆಗ್ಡೆ ಅಂತ್ಯಕ್ರಿಯೆ ಮಾಡಲಾಗುತ್ತದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಮಗ ಮರಣ ಹೊಂದಿದ ತಿಂಗಳೊಳಗೆ ತಂದೆ ಗಂಗಯ್ಯ ಹೆಗ್ಡೆ ಕೊನೆಯುಸಿರೆಳೆದಿದಾರೆ.
ನಿನ್ನೆ ಮೈಸೂರಿನ ಖಾಸಗಿ ಅಸ್ಪತ್ರೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಗಂಗಯ್ಯ ಹೆಗ್ಡೆ ಮೃತಪಟ್ಟಿದ್ದರು. ವಯೋಸಹಜ ಅನಾರೋಗ್ಯದಿಂದಾಗಿಹಲವು ದಿನಗಳಿಂದ ಆಸ್ಪತ್ರೆಯಲ್ಲೇಅವರುಚಿಕಿತ್ಸೆ ಪಡೆಯುತ್ತಿದ್ದರು. ಮಗ ಉದ್ಯಮಿ ಸಿದ್ದಾರ್ಥ ಹೆಗ್ಡೆ ಸಾವಿನ ವಿಚಾರವೂ ಅವ್ರಿಗೆ ಗೊತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.