ಕರ್ನಾಟಕ

karnataka

ETV Bharat / state

ಆತ್ಮಹತ್ಯೆಗೂ ಮುನ್ನ ಮೂರು ದಿನ ಚಿಕ್ಕಮಗಳೂರು ಹೋಂ ಸ್ಟೇನಲ್ಲಿ ತಂಗಿದ್ದ ಸಂತೋಷ್ ಪಾಟೀಲ್ - Contractor Santosh's suicide case

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಉಡುಪಿ ಪೊಲೀಸರು ಚಿಕ್ಕಮಗಳೂರಿಗೆ ಆಗಮಿಸಿದ್ದು,ಪೊಲೀಸರು ಹೋಂ ಸ್ಟೇಯ ಸಿಸಿಟಿವಿಯ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಪೊಲೀಸರು, ಹೋಂ ಸ್ಟೇ ಸಿಬ್ಬಂದಿಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

santosh-is-staying-at-a-private-homestay-in-chikmagalur
ಚಿಕ್ಕಮಗಳೂರಿನ ಖಾಸಗಿ ಹೋಂಸ್ಟೇ ನಲ್ಲಿ ವಾಸ್ತವ್ಯ ಹೂಡಿದ್ದ ಸಂತೋಷ್

By

Published : Apr 16, 2022, 2:12 PM IST

ಚಿಕ್ಕಮಗಳೂರು:ಉಡುಪಿ ಲಾಡ್ಜ್​​ನಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ನಡೆಯುತ್ತಿದೆ. ಸಾವಿಗೂ ಮುನ್ನ ಸಂತೋಷ್ ಪಾಟೀಲ್ ಕಾಫಿನಾಡಲ್ಲಿ ಮೂರು ದಿನ ವಾಸ್ತವ್ಯ ಹೂಡಿದ್ದರು. ಕೈಮರ ಸಮೀಪದ ಖಾಸಗಿ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದು, ಇಬ್ಬರು ಸ್ನೇಹಿತರ ಜೊತೆ ಮೂರು ದಿನ ಹೋಮ್ ಸ್ಟೇಯಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.

ಎಂಟರಿಂದ ಹತ್ತು ತಾರೀಕಿನವರೆಗೆ ಮೂರು ದಿನವೂ ಹೋಂ ಸ್ಟೇನಲ್ಲಿ ಸಂತೋಷ್ ವಾಸ್ತವ್ಯ ಹೂಡಿದ್ದು, ಹೋಂ ಸ್ಟೇನಲ್ಲಿ ಸಂತೋಷ್ ಎಂದಿನಂತೆ ಇದ್ದರು. ಜೊತೆಗೆ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿಕೊಂಡು ಆರಾಮಾಗಿದ್ದರು. ಅಲ್ಲಿಂದ ತೆರಳುವಾಗ ಸಂತೋಷ್ ಹೋಮ್ ಸ್ಟೇನಲ್ಲಿದ್ದ ನಾಯಿಗಳಿಗೆ ಬಿಸ್ಕೇಟ್ ಹಾಕಿ ಹೋಗಿದ್ದರು ಎಂದು ತಿಳಿದುಬಂದಿದೆ.

ಅವರ ಆತ್ಮಹತ್ಯೆ ನಂತರ ಹೆಚ್ಚಿನ ತನಿಖೆಗಾಗಿ ಉಡುಪಿ ಪೊಲೀಸರು ಚಿಕ್ಕಮಗಳೂರಿಗೆ ಆಗಮಿಸಿದ್ದು, ಪೊಲೀಸರು ಹೋಂ ಸ್ಟೇಯ ಸಿಸಿಟಿವಿಯ ಡಿವಿಆರ್ ತೆಗೆದುಕೊಂಡು ಹೋಗಿದ್ದಾರೆ. ಪೊಲೀಸರು ಹೋಂ ಸ್ಟೇ ಸಿಬ್ಬಂದಿಯಿಂದ ಸಂತೋಷ್ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಓದಿ :ಮೃತ ಗುತ್ತಿಗೆದಾರನ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ: ಭಾಸ್ಕರ್‌ ರಾವ್

ABOUT THE AUTHOR

...view details