ಚಿಕ್ಕಮಗಳೂರು: ಜಿಲ್ಲೆಯಲ್ಲಿ ವಾರದಿಂದ ಅಬ್ಬರಿಸುತ್ತಿದ್ದ ವರುಣ ಇಂದು ಸ್ವಲ್ಪ ತಣ್ಣಗಾಗಿದ್ದಾನೆ. ಹಳ್ಳ-ಕೊಳ್ಳಗಳು, ನದಿಗಳು ಹಾಗೂ ಕಾಲುವೆಯಲ್ಲಿ ಹರಿಯುತ್ತಿದ್ದ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ತಗ್ಗಿದ ವರುಣನ ಆರ್ಭಟ
ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇಂದು ಬಿಡುವು ಕೊಟ್ಟಿದೆ. ಈ ಪರಿಣಾಮ ಚಿಕ್ಕಮಗಳೂರು ಜಿಲ್ಲೆಯ ಜನರು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಹರಿಯುತ್ತಿರುವ ನದಿ ನೀರು
ತುಂಗಾ, ಭದ್ರ, ಹೇಮಾವತಿ ನದಿಯ ಹರಿವಿನಲ್ಲೂ ಇಳಿಮುಖವಾಗಿದೆ. ವಾರದಿಂದ ಸುರಿದ ಮಹಾ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದ್ದವು. ನದಿಯ ನೀರು ರಸ್ತೆಗಳು, ಗ್ರಾಮಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಮಲೆನಾಡು ಭಾಗದ ಜನರು ಮತ್ತು ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
Last Updated : Aug 11, 2020, 1:27 PM IST