ಚಿಕ್ಕಮಗಳೂರು :ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕುಟುಂಬ ಸಮೇತರಾಗಿ ಶೃಂಗೇರಿಯ ಶಾರದಾ ಪೀಠಕ್ಕೆ ಭೇಟಿ ನೀಡಿ ನಿರ್ಗಮಿಸುವ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಮಕ್ಕಳತ್ತ ಕೈ ಬೀಸಿ ಗಮನ ಸೆಳೆದರು.
ಇಂದು ಜಿಲ್ಲೆಯ ಶೃಂಗೇರಿಯ ಶಾರದಾ ಪೀಠಕ್ಕೆ ಕುಟುಂಬ ಸಮೇತರಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಿದ್ದರು. ಶಾರದಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪೀಠದಿಂದ ನಿರ್ಗಮಿಸುತ್ತಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿ ರಾಷ್ಟ್ರಪತಿಗಳನ್ನು ನೋಡಲು ನೂರಾರು ಶಾಲಾ ಮಕ್ಕಳು ಕಾತುರದಿಂದ ಕಾದು ನಿಂತಿದ್ದರು.