ಕರ್ನಾಟಕ

karnataka

ETV Bharat / state

ಎಸ್​ಡಿಪಿಐ ಮತ್ತು ಪಿಎಫ್​​ಐ ಕಚೇರಿಗಳ ಮೇಲೆ ಪೊಲೀಸರ ದಾಳಿ - ಈಟಿವಿ ಭಾರತ ಕನ್ನಡ

ಚಿಕ್ಕಮಗಳೂರಿನಲ್ಲಿ ಎಸ್​ಡಿಪಿಐ ಮತ್ತು ಪಿಎಫ್​​ಐ ಕಚೇರಿಗಳು ಮತ್ತು ನಾಯಕರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ವಿವಿಧ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

police-ride-on-sdpi-and-pfi-offices-at-chikkamagaluru
ಎಸ್​ಡಿಪಿಐ ಮತ್ತು ಪಿಎಫ್​​ಐ ಕಚೇರಿಗಳ ಮೇಲೆ ಪೊಲೀಸರ ದಾಳಿ

By

Published : Sep 29, 2022, 3:08 PM IST

ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿಷೇಧಿತ ಪಿಎಫ್​​ಐ ಸಂಘಟನೆ ಮೇಲೆ ಪೊಲೀಸರ ದಾಳಿ ಮುಂದುವರೆದಿದೆ. ಪಿಎಫ್​​ಐ ಸಂಘಟನೆಯ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜೊತೆಗೆ ಚಿಕ್ಕಮಗಳೂರು ನಗರದ ಎಸ್ ಡಿಪಿಐ ಕಚೇರಿ ಮೇಲೂ ಪೊಲೀಸರು ರೇಡ್​ ಮಾಡಿದ್ದಾರೆ.

ಪಿಎಫ್​​ಐ, ಎಸ್​ಡಿಪಿಐ ಕಾರ್ಯಕರ್ತರು, ಮುಖಂಡರ ಚಟುವಟಿಕೆ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಜಿಲ್ಲಾಧಿಕಾರಿಗಳ ಸರ್ಚ್ ವಾರೆಂಟ್ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ಎಸ್​ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಮನೆ ಹಾಗೂ ಕಚೇರಿಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದು, ಗೌಸ್ ಮುನೀರ್ ನ ಉಪ್ಪಳ್ಳಿಯ ಮನೆ ಹಾಗೂ ಮಲ್ಲಂದೂರು ರಸ್ತೆಯ ಕಚೇರಿಯಲ್ಲೂ ಪರಿಶೀಲಿಸಲಾಗುತ್ತಿದೆ.

ಎಸ್​ಡಿಪಿಐ ಮತ್ತು ಪಿಎಫ್​​ಐ ಕಚೇರಿಗಳ ಮೇಲೆ ಪೊಲೀಸರ ದಾಳಿ

ಜಿಲ್ಲಾಧಿಕಾರಿ ನಿಯೋಜಿತ ವಿವಿಧ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದ್ದು, ಜೊತೆಗೆ ಎಸ್​ಡಿಪಿಐ ಜಿಲ್ಲಾ ಕಚೇರಿ ಮೇಲೂ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದ ಮಲ್ಲಂದೂರು ರಸ್ತೆಯಲ್ಲಿರುವ ಎಸ್​ಡಿಪಿಐ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ :ಪಿಎಫ್​ಐನ ಎಲ್ಲಾ ಶಾಖಾ ಕಚೇರಿಗಳಿಗೆ ಸಂಜಯೊಳಗೆ ಬೀಗಮುದ್ರೆ: ಪೊಲೀಸ್​ ಆಯುಕ್ತರ ಆದೇಶ

ABOUT THE AUTHOR

...view details