ಕರ್ನಾಟಕ

karnataka

By

Published : Mar 14, 2020, 1:52 AM IST

ETV Bharat / state

ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇಲ್ಲ: ಡಿಸಿ ಡಾ. ಬಗಾದಿ ಗೌತಮ್ ಸ್ವಷ್ಟನೆ

ಚಿಕ್ಕಮಗಳೂರಿನಲ್ಲಿ ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆ ವ್ಯಕ್ತಪಡಿಸಿ, ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಯಾವುದೇ ಸೋಂಕು ಇಲ್ಲ ಎಂಬುದು ಧೃಡಪಟ್ಟಿದೆ.

No corona virus infection
ಚಿಕ್ಕಮಗಳೂರಿನ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇಲ್ಲ

ಚಿಕ್ಕಮಗಳೂರು:ಜಿಲ್ಲಾಸ್ಪತ್ರೆಗೆ ಕೊರೊನಾ ಸೋಂಕು ತಗುಲಿರಬಹುದೆಂಬ ಶಂಕೆ ವ್ಯಕ್ತಪಡಿಸಿ, ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ರಕ್ತ ಪರೀಕ್ಷೆಯ ಮಾದರಿಯಲ್ಲಿ ನೆಗೆಟಿವ್​​ ಬಂದಿದ್ದು, ಚಿಕ್ಕಮಗಳೂರು ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್​ನಲ್ಲಿ ಸುಮಾರು 45 ವರ್ಷದ ವ್ಯಕ್ತಿಗೆ ನಿನ್ನೆ ಸಂಜೆಯಿಂದ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಹಾಸನ ಜಿಲ್ಲೆಗೆ ರವಾನೆ ಮಾಡಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಕೊರೊನಾ ನೆಗಿಟಿವ್​ ಎಂದು ಬಂದಿದೆ.

ಚಿಕ್ಕಮಗಳೂರಿನ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇಲ್ಲ

ಕಳೆದ 15 ದಿನಗಳ ಹಿಂದೆ ಕುವೈತ್​ನಿಂದ ಮಂಗಳೂರಿಗೆ ಆಗಮಿಸಿದ್ದ ವ್ಯಕ್ತಿಗೆ ತೀವ್ರ ಜ್ವರ, ಕೆಮ್ಮು, ಶೀತ ಹಿನ್ನೆಲೆ ಆತನೇ ಸ್ವಯಂ ಪ್ರೇರಿತನಾಗಿ ಆಸ್ಪತ್ರೆಗೆ ದಾಖಲುಗೊಂಡಿದ್ದನು. ನಿನ್ನೆ ಮೂಡಿಗೆರೆಯಲಿರುವ ತಂಗಿ ಮನೆಗೆ ಆಗಮಿಸಿದ್ದ ವೇಳೆ, ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ, ಆತನೇ ಕೊರೊನಾ ವೈರಸ್ ಬಗ್ಗೆ ಅನುಮಾನಗೊಂಡು ಚಿಕ್ಕಮಗಳೂರು ಜಿಲ್ಲಾಸ್ವತ್ರೆಯಲ್ಲಿ ದಾಖಲಾಗಿದ್ದರು.

ಇಂದು ಆತನ ರಕ್ತ ಪರೀಕ್ಷೆಯ ಮಾದರಿಯಲ್ಲಿ ನೆಗೆಟಿವ್ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ವಷ್ಟನೆ ನೀಡಿದ್ದು, ಯಾರು ಭಯ ಪಡುವ ಅಗತ್ಯ ಇಲ್ಲ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

For All Latest Updates

ABOUT THE AUTHOR

...view details