ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕಾರಗದ್ದೆ ಸಮೀಪದ ಎಸ್ಟೇಟೊಂದರ ಕೂಲಿ ಲೈನ್ ಪಕ್ಕದ ಬಾಳೆ ಗಿಡಗಳ ಮಧ್ಯೆ ನವಜಾತ ಶಿಶುವಿನ ಮೃತದೇಹ ಕಂಡುಬಂದಿದೆ. ಈ ಬಗ್ಗೆ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಸತ್ಯನಾರಾಯಣ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರು: ಬಾಳೆ ಗಿಡಗಳ ಮಧ್ಯೆ ನವಜಾತ ಶಿಶುವಿನ ಮೃತದೇಹ ಪತ್ತೆ - ನವಜಾತ ಶಿಶು
ಚಿಕ್ಕಮಗಳೂರು ಜಿಲ್ಲೆಯ ಎಸ್ಟೇಟೊಂದರ ಕೂಲಿ ಲೈನ್ ಪಕ್ಕದ ಬಾಳೆ ಗಿಡಗಳ ಮಧ್ಯೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ.
ನವಜಾತ ಶಿಶುವಿನ ಮೃತ ದೇಹ ಪತ್ತೆ
ನಾವು ಕೂಲಿ ಲೈನ್ಗೆ ಹೋಗುತ್ತಿರುವಾಗ ತೋಟದ ಬಾಳೆಗಿಡದ ಬಳಿ ಮಗುವಿನ ಮೃತದೇಹವನ್ನು ನೋಡಿದೆವು. ಸುಮಾರು ಎರಡು ದಿನದ ಹಿಂದೆ ಜನಿಸಿದ ಮಗುವಾಗಿದ್ದು, ನಾವು ನೋಡುವಾಗ ಮೃತಪಟ್ಟಿತ್ತು ಎಂದು ಅವರು ತಿಳಿಸಿದ್ದಾರೆ.
ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ಮಗುವಿನ ಮೃತದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.