ಚಿಕ್ಕಮಗಳೂರು:ನಾಲ್ಕೆನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕಾರ ಮಾಡಿರುವ ಯಡಿಯೂರಪ್ಪನವರು ನಾಳೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡುತ್ತಿರುವ ಹಿನ್ನೆಲೆ ಯಡಿಯೂರಪ್ಪನವರ ಆಪ್ತ ಎಂ.ಪಿ.ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ.
ದೇವರ ಮೊರೆ ಹೋದ ಬಿಎಸ್ವೈ ಆಪ್ತ ಎಂ.ಪಿ.ಕುಮಾರಸ್ವಾಮಿ - ಮೂಡಿಗೆರೆ ಶಾಸಕ
ನಾಳೆ ವಿಶ್ವಾಸಮತ ಯಾಚನೆ ಮಾಡುತ್ತಿರುವ ಹಿನ್ನೆಲೆ ಯಡಿಯೂರಪ್ಪನವರ ಆಪ್ತ ಎಂ.ಪಿ.ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ.
ಕಾಲಭೈರಶ್ವರನ ಸನ್ನದಿ
ಮೂಡಿಗೆರೆ ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಮೂಡಿಗೆರೆಯ ದೇವರ ಮನೆಯ ಕಾಲಭೈರಶ್ವರನ ಸನ್ನಿದಿಯಲ್ಲಿ ಶಾಸಕ ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರ ವಿಶ್ವಾಸಮತ ಯಾಚನೆ ಯಶ್ವಸಿಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೆ ಬಹುಮತ ಸಾಬೀತು ಪಡಿಸುವ ಕಾರ್ಯಕ್ಕೆ ಯಾವುದೇ ವಿಘ್ನಗಳು ಎದುರಾಗಬಾರದು ಎಂದು ದೇವರ ಮೊರೆ ಹೋಗಿದ್ದಾರೆ.
ನಾಳೆ ಬಹುಮತ ಸಾಬೀತು ಪಡಿಸಿ ಯಶಸ್ವಿವಾಗಿ ಆಡಳಿತ ನಡೆಸಲಿ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ದೇವರಲ್ಲಿ ಬೇಡಿಕೊಂಡಿದ್ದಾರೆ.