ಕರ್ನಾಟಕ

karnataka

ETV Bharat / state

ಮಲ್ನಾಡ್ ಚಾಲೆಂಜ್ ಈವೆಂಟ್​​..7 ದಿನಗಳಲ್ಲಿ 500 ಕಿ.ಮೀ ಸಾಗಲಿದ್ದಾರೆ ಈ ಸೈಕಲ್​​ ಸವಾರರು..!

ಇಂದು ಚಿಕ್ಕಮಗಳೂರಿನಿಂದ ಶುರುವಾದ ಸೈಕಲ್ ಪಯಣ, ಕಾಫಿನಾಡನ್ನು ಮೂರು ದಿನ ಸುತ್ತಿ ಆ ಬಳಿಕ ಕುಂದಾಪುರದತ್ತ ಹೋಗಲಿದೆ. ಸದ್ಯ ಸೈಕಲ್​ ತಂಡ ತೇಗೂರು, ಬಸ್ಕಲ್, ಕನ್ನಾಪುರ, ಮಾಕೋನಹಳ್ಳಿ, ಜನ್ನಾಪುರ, ಜೇನು ಬೈಲ್ ಮೂಲಕ ಸಾಗಿ ದೇವರಮನೆ ತಲುಪಿದೆ..

ಸೈಕಲ್​​ ಸವಾರರು
ಸೈಕಲ್​​ ಸವಾರರು

By

Published : Nov 30, 2020, 1:36 PM IST

ಚಿಕ್ಕಮಗಳೂರು :ಬೆಂಗಳೂರಿನ ಐ ಸೈಕಲ್ ಇನ್ ಟೀಂ ಎಂಬ ಸೈಕಲ್​​ ತಂಡವೊಂದು ಮಲೆನಾಡಿನಲ್ಲಿ ಗ್ರೇಟ್ ಮಲ್ನಾಡ್ ಚಾಲೆಂಜ್ ಎಂಬ ಈವೆಂಟ್​ ಆಯೋಜಿಸಿದೆ. 7 ದಿನದಲ್ಲಿ ಬರೋಬ್ಬರಿ 500 ಕಿ.ಮೀ ದೂರವನ್ನು ಸೈಕ್ಲಿಂಗ್ ಮಾಡಲು ರಸ್ತೆಗಿಳಿದಿದ್ದಾರೆ. ಚಿಕ್ಕಮಗಳೂರಿನಿಂದ ಕುಂದಾಪುರದವರೆಗೆ ಈ ಸೈಕಲ್ ಸವಾರಿ ಸಾಗಲಿದೆ.

ಪ್ರಕೃತಿ ಉಳಿಸುವ ಜೊತೆಗೆ ಸೈಕಲ್ ಸವಾರಿ ಮಾಡುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಎಂಬ ಉದ್ದೇಶದಿಂದ ಈ ಸೈಕ್ಲಿಂಗ್ ಯಾನ ನಡೆಯುತ್ತಿದೆ. 7 ದಿನಗಳ ಕಾಲ ಬರೋಬ್ಬರಿ 500 ಕಿ.ಮೀ ದೂರ ಸಾಗುವ ಮಲ್ನಾಡ್ ಸಾಹಸದಲ್ಲಿ 30 ಮಂದಿ ಸೈಕ್ಲಿಸ್ಟ್​ಗಳು ಭಾಗಿಯಾಗಿದ್ದಾರೆ.

7 ದಿನಗಳಲ್ಲಿ 500 ಕಿ.ಮೀ ಸಾಗಲಿದ್ದಾರೆ ಈ ಸೈಕಲ್​​ ಸವಾರರು

ಇಂದು ಚಿಕ್ಕಮಗಳೂರಿನಿಂದ ಶುರುವಾದ ಸೈಕಲ್ ಪಯಣ, ಕಾಫಿನಾಡನ್ನು ಮೂರು ದಿನ ಸುತ್ತಿ ಆ ಬಳಿಕ ಕುಂದಾಪುರದತ್ತ ಹೋಗಲಿದೆ. ಸದ್ಯ ಸೈಕಲ್​ ತಂಡ ತೇಗೂರು, ಬಸ್ಕಲ್, ಕನ್ನಾಪುರ, ಮಾಕೋನಹಳ್ಳಿ, ಜನ್ನಾಪುರ, ಜೇನು ಬೈಲ್ ಮೂಲಕ ಸಾಗಿ ದೇವರಮನೆ ತಲುಪಿದೆ.

ಈ ಬಾರಿ ಕೊರೊನಾ ಹಿನ್ನೆಲೆ ವಿದೇಶಿ ಸೈಕಲ್ ಸವಾರರು ಬಂದಿಲ್ಲ. ಆದರೆ, ಬೇರೆ ಬೇರೆ ರಾಜ್ಯಗಳಿಂದ ಹಲವರು ಸೈಕ್ಲಿಸ್ಟ್​ಗಳು ಮಲೆನಾಡ ಪಯಣದಲ್ಲಿ ಭಾಗಿಯಾಗಿದ್ದಾರೆ. ಕೇವಲ ಯುವಕರಲ್ಲದೇ ಯುವತಿಯರು, ಮಹಿಳೆಯರೂ ಕೂಡ ಈ ಚಾಲೆಂಜ್​ ಸ್ವೀಕರಿಸಿ ಸೈಕಲ್ ಏರಿದ್ದಾರೆ.

ABOUT THE AUTHOR

...view details