ಕರ್ನಾಟಕ

karnataka

ETV Bharat / state

ರೋಗಿಗಳಲ್ಲಿ ದೇವರನ್ನು ಕಾಣುವ ವೈದ್ಯರ ಪರಂಪರೆ ಬೆಳೆಯಲಿ: ಸಚಿವ ಸಿ.ಟಿ.ರವಿ

ಯಾರು ರೋಗಿಗಳಲ್ಲಿ ದೇವರನ್ನು ಕಾಣುತ್ತಾರೋ ಅವರು ದೇವರೇ ಆಗುತ್ತಾರೆ. ಹೀಗಾಗಿ ರೋಗಿಗಳಲ್ಲಿ ದೇವರನ್ನು ಕಾಣುವ ವೈದ್ಯರ ಪರಂಪರೆ ಬೆಳೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆಶಿಸಿದರು.

By

Published : Jul 1, 2020, 5:20 PM IST

Minister CT Ravi
ಸಚಿವ ಸಿ ಟಿ ರವಿ

ಚಿಕ್ಕಮಗಳೂರು: ನಮ್ಮ ಸಮಾಜದಲ್ಲಿ ತಂದೆ, ತಾಯಿ, ಗುರುಗಳನ್ನು ಬಿಟ್ಟರೆ ತದನಂತರ ದೇವರ ಸ್ಥಾನದಲ್ಲಿ ವೈದ್ಯರನ್ನು ನೋಡಲಾಗುತ್ತದೆ. ಯಾರು ರೋಗಿಗಳಲ್ಲಿ ದೇವರನ್ನು ಕಾಣುತ್ತಾರೋ ಅವರು ದೇವರೇ ಆಗುತ್ತಾರೆ. ಹೀಗಾಗಿ ರೋಗಿಗಳಲ್ಲಿ ದೇವರನ್ನು ಕಾಣುವ ವೈದ್ಯರ ಪರಂಪರೆ ಬೆಳೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಆಶಿಸಿದರು.

ಸಚಿವ ಸಿ.ಟಿ.ರವಿ

ನಗರದಲ್ಲಿ ಮಾತನಾಡಿದ ಅವರು, ವೈದ್ಯರ ದಿನಾಚರಣೆ ಪ್ರಯುಕ್ತ ನಾನು ಅವರಿಗೆ ಶುಭಾಶಯ ಕೋರುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ಈ ವರ್ಷದ ನವೆಂಬರ್ ತಿಂಗಳವರೆಗೂ 80 ಕೋಟಿ ಬಡವರಿಗೆ ಗರೀಬ್​ ಕಲ್ಯಾಣ್​ ಯೋಜನೆ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯದ ಜನರ ಪರವಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಬಡವರ ಪರವಾಗಿರುವ ಕಾಳಜಿಯನ್ನು ಬೇರೆ ಯಾರೋ ಹೇಳಿಕೊಡಬೇಕಾಗಿಲ್ಲ. ಕೆಲವರು ಬಡತನವನ್ನು ದೂರದಲ್ಲಿ ನೋಡಿದ್ದಾರೆ. ಅದು ಅವರಿಗೆ ತಮಾಷೆಯ ವಿಷಯ. ಆದರೆ ಪ್ರಧಾನಿ ಮೋದಿಯವರು ಬಡ ಕುಟುಂಬದಲ್ಲಿ ಹುಟ್ಟಿದವರು. ಬಡತನವನ್ನು ಅನುಭವಿಸಿದವರು. ಅವರಿಗೆ ಬಡತನದ ಬಗ್ಗೆ ಹೇಳಬೇಕಾಗಿಲ್ಲ. ಅದು ಜನ್ಮದತ್ತವಾಗಿಯೇ ಬಂದಿರುವ ಕಾಳಜಿ ಎಂದರು.

ಹೀಗಾಗಿ ತಮ್ಮ ನಿಲುವಿನಲ್ಲಿಯೂ ಅದನ್ನು ತೋರಿಸಿದ್ದಾರೆ. ತಮ್ಮ ಅಧಿಕಾರದಲ್ಲಿಯೂ ಅದನ್ನು ಜಾರಿಗೆ ತಂದಿದ್ದಾರೆ. ಗರೀಬ್​ ಕಲ್ಯಾಣ್​ ಯೋಜನೆ ವಿಸ್ತರಣೆ ಮಾಡಿರುವುದಕ್ಕೆ ನಾನು ಸ್ವಾಗತ ಮಾಡುತ್ತೇನೆ ಎಂದರು.

ABOUT THE AUTHOR

...view details