ಚಿಕ್ಕಮಗಳೂರು: ಅಡಕೆ ಚೇಣಿ ಮನೆಯಲ್ಲಿ ಚಿರತೆ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು: ಅಡಕೆ ಚೇಣಿ ಮನೆಯಲ್ಲಿ ಚಿರತೆ ಪತ್ತೆ! - ಅಡಿಕೆ ಚೇಣಿ ಮನೆಯಲ್ಲಿ ಚಿರತೆ ಪತ್ತೆ
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೀರನಹಳ್ಳಿಯ ರಾಜೀವ್ ಎಂಬುವವರ ಅಡಕೆ ಚೇಣಿ ಮನೆಯಲ್ಲಿ ಚಿರತೆ ಪತ್ತೆಯಾಗಿದೆ.
ಚಿರತೆಯ ಓಡಾಡುತ್ತಿರುವ ದೃಶ್ಯ
ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೀರನಹಳ್ಳಿಯ ರಾಜೀವ್ ಎಂಬುವವರ ಅಡಕೆ ಚೇಣಿಮನೆಯಲ್ಲಿ ಚಿರತೆಯ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಭಾಗದಲ್ಲಿ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಮನವಿ ಮಾಡಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.