ಕರ್ನಾಟಕ

karnataka

ETV Bharat / state

ಕಡೂರಿನಲ್ಲಿ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ - lady died at kadur

ಎರಡು ದಿನದ ಹಿಂದೆ ಗಂಡು ಮಗುವಿಗೆ ಶೀಲಾ ಜನ್ಮ ನೀಡಿದ್ದು, ಸದ್ಯ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಅವರ ಕುಟುಂಬದ ಸದಸ್ಯರು ಗಂಭೀರ ಆರೋಪ ಮಾಡುತ್ತಿದ್ದಾರೆ.

lady died at kadur; people outrage against hospital staff
ಕಡೂರಿನಲ್ಲಿ ಬಾಣಂತಿ ಕೊನೆಯುಸಿರು; ವೈದ್ಯರ ನಿರ್ಲಕ್ಷ್ಯ ಆರೋಪ

By

Published : Feb 20, 2021, 2:47 PM IST

ಚಿಕ್ಕಮಗಳೂರು: ಜಿಲ್ಲೆಯ ಕಡೂರು ನಗರದಲ್ಲಿ ಬಾಣಂತಿಯೋರ್ವಳು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.

ಕಡೂರಿನಲ್ಲಿ ಬಾಣಂತಿ ಕೊನೆಯುಸಿರು; ವೈದ್ಯರ ನಿರ್ಲಕ್ಷ್ಯ ಆರೋಪ

ಕಡೂರಿನ ಅಂಚೆ ಚೋಮನಹಳ್ಳಿ ನಿವಾಸಿ ಶೀಲಾ (22) ಮೃತ ದುರ್ದೈವಿ. ಎರಡು ದಿನದ ಹಿಂದೆ ಗಂಡು ಮಗುವಿಗೆ ಶೀಲಾ ಜನ್ಮ ನೀಡಿದ್ದು, ಸದ್ಯ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾಳೆ ಎಂದು ಅವರ ಕುಟುಂಬದ ಸದಸ್ಯರು ಗಂಭೀರ ಆರೋಪ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ:ತೈಲ ಉತ್ಪನ್ನಗಳ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್​ನಿಂದ ಪ್ರತಿಭಟನೆ

ಕಡೂರು ತಾಲೂಕು ಆಸ್ಪತ್ರೆಯ ವೈದ್ಯರ ಮೇಲೆ ಈ ಆರೋಪ ಕೇಳಿ ಬಂದಿದೆ. ಮೃತ ಶೀಲಾ ಕುಟುಂಬಸ್ಥರು ಕಡೂರು ಪೊಲೀಸ್ ಠಾಣೆ ಎದುರು ಆಕೆಯ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಕಡೂರಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ABOUT THE AUTHOR

...view details