ಚಿಕ್ಕಮಗಳೂರು :ಬೇಲಿಗೆ ಹಾಕಿದ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಾಳಿಂಗ ಸರ್ಪವನ್ನು ರಕ್ಷಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಬಾಳ ಗಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಾಗರಾಜ್ ಭಟ್ ಎಂಬುವರ ಮನೆಯ ಬೇಲಿಗೆ ಹಾಕಿದ ಬಲೆಯಲ್ಲಿ ಬರೋಬ್ಬರಿ 13 ಅಡಿ ಉದ್ದದ ಕಾಳಿಂಗ ಸರ್ಪ ಸಿಕ್ಕಿ ಹಾಕಿಕೊಂಡಿತ್ತು. ಎಷ್ಟೇ ಪ್ರಯತ್ನ ಮಾಡಿದರೂ ಬಲೆಯನ್ನು ಬಿಡಿಸಿಕೊಂಡು ಹೊರ ಬರಲಾರದೇ ನರಳಾಡುತಿತ್ತು.
ಇದನ್ನು ಗಮನಿಸಿದಂತಹ ಮನೆಯ ಮಾಲೀಕ ನಾಗರಾಜ್ ಭಟ್ ಕೂಡಲೇ, ಉರಗ ತಜ್ಞ ಹರೀಂದ್ರ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹರೀಂದ್ರ ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ, ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಬಲೆಯಿಂದ ಬಿಡಿಸಿ ಅದರ ಆರೈಕೆ ಮಾಡಿದ್ದಾರೆ.