ಕರ್ನಾಟಕ

karnataka

ETV Bharat / state

ಮೈಕ್ ಬ್ಯಾನ್ ಅಭಿಯಾನ : ಮತ್ತೆ ಸಮುದಾಯದ ವಿರುದ್ಧ ಗುಟುರು ಹಾಕಿದ ಕಾಳಿಸ್ವಾಮಿ - ಕರ್ನಾಟಕದಲ್ಲಿ ಮಸೀದಿ ಮೇಲಿನ ಮೈಕ್ ಬ್ಯಾನ್ ಅಭಿಯಾನ

ಮಸೀದಿಯಲ್ಲಿ ಕೂಗುವುದನ್ನ ನಿಲ್ಲಿಸಲು ಕೋರ್ಟ್ ಆದೇಶ ನೀಡಿದೆ. ಕೋರ್ಟ್‌ ಆದೇಶ ಧಿಕ್ಕರಿಸಿದ್ದಾರೆ. ಅವರಿಗೆ ಕಾನೂನು ಏನು ಎಂಬುದನ್ನು ತೋರಿಸಬೇಕಿದೆ ಎಂದು ಕಾಳಿಮಠದ ಸ್ವಾಮೀಜಿ ಹೇಳಿದ್ದಾರೆ.

kali swamy reaction about Mike Bana campaign
kali swamy reaction about Mike Bana campaign

By

Published : Apr 4, 2022, 5:34 PM IST

Updated : Apr 4, 2022, 6:15 PM IST

ಚಿಕ್ಕಮಗಳೂರು: ಮಸೀದಿಗಳಲ್ಲಿ ಮೈಕ್ ಬ್ಯಾನ್ ಅಭಿಯಾನ ಹಿಂದಿನಿಂದಲೂ ಇದೆ. ಇದು ಇಂದಿನ ಹೊಸ ಅಭಿಯಾನವಲ್ಲ. ನಮ್ಮಲ್ಲಿ‌ ಕಾಳಿ ಕೂಗು ಅಂತ ಇದೆ. ಅವರು ಕೂಗುವ ಸಮಯಕ್ಕೆ ನಾವು ಸಹ ಕೂಗುತ್ತೇವೆ. ದಿನದಲ್ಲಿ 5 ಬಾರಿ ಅವರ ಹಾಗೆಯೇ ನಾವು ಸಹ ಕಾಳಿ ಕೂಗು ಕೂಗುತ್ತೇವೆ ಎಂದು ಕಾಳಿಸ್ವಾಮಿ ಹೇಳಿಕೆ ನೀಡಿದ್ದಾರೆ.

ಸಖರಾಯಪಟ್ಟಣದಲ್ಲಿ ಮಾತನಾಡಿದ ಅವರು, ಮಸೀದಿಯಲ್ಲಿ ಕೂಗುವುದನ್ನ ನಿಲ್ಲಿಸಲು ಕೋರ್ಟ್ ಆದೇಶ ನೀಡಿದೆ. ಕೋರ್ಟ್‌ ಆದೇಶವನ್ನ ಅವರು ಧಿಕ್ಕರಿಸಿದ್ದಾರೆ. ಅವರಿಗೆ ಕಾನೂನು ಏನು ಎಂಬುದನ್ನು ತೋರಿಸಬೇಕಿದೆ. ಆದೇಶವನ್ನ ಪಾಲಿಸದೇ ಅವರು ಕೂಗುವುದಾದರೆ ನಮಗೂ ಅವಕಾಶ ಕೊಡಲಿ ಎಂದಿದ್ದಾರೆ.

ಸಮುದಾಯದ ವಿರುದ್ಧ ಗುಟುರು ಹಾಕಿದ ಕಾಳಿಸ್ವಾಮಿ

ಇದನ್ನೂ ಓದಿ: ನಿಪ್ಪಾಣಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಹತ್ಯೆ

ಅವರು ಕೂಗುವುದನ್ನ ನಿಲ್ಲಿಸಿ ಇಲ್ಲ, ನಮಗೆ ಅವಕಾಶ ಕೊಡಿ. ನಮ್ಮ ಮೇಲೆ ಏರಿಕೆ ಮಾಡಿ ಹಿಂದೂಗಳು ಬಾಯಿಮುಚ್ಚಿಕೊಂಡು ಇರಿ ಎಂದರೆ ಹೇಗೆ? ಬೇರೆಯವರು ಏನು ಬೇಕಿದ್ದರೂ ಮಾಡ್ಲಿ ಅನ್ನುವುದು ಸರಿಯಲ್ಲ. ನಾನು ಒಬ್ಬ ಯತಿ ನನ್ನ ಹಾಗೆ ನೂರಾರು ಯತಿಗಳು ಕೂಗುತ್ತೇವೆ. ರಾಮನಿಗೆ ಮುಟ್ಟುವವರೆಗೂ ನಾವು ಕೂಗುತ್ತೇವೆ. ಈ ಸಂಬಂಧ ಹಿಂದೂಪರ ಸಂಘಟನೆಗಳೆಲ್ಲಾ ಒಂದಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದ್ದಾರೆ.

Last Updated : Apr 4, 2022, 6:15 PM IST

For All Latest Updates

TAGGED:

ABOUT THE AUTHOR

...view details