ಚಿಕ್ಕಮಗಳೂರು: ಮಂಡ್ಯ ಜನತೆಗೆ ಕುಮಾರಣ್ಣ ಏನು ಎಂಬುದು ಗೊತ್ತಿದೆ, ಮಂಡ್ಯ ಜನರ ಪ್ರೀತಿ ಉಳಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶೃಂಗೇರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜನರ ಪ್ರೀತಿ ಉಳಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ನಿಖಿಲ್ - sincer
ಮಂಡ್ಯ ಜನತೆಯ ಪ್ರೀತಿ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕುಮಾರಸ್ವಾಮಿ ಬಗ್ಗೆ ಜನತೆಗೆ ಗೊತ್ತಿದೆ ಎಂದು ಶೃಂಗೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ.
ಶೃಂಗೇರಿಯ ಪೀಠದ ಆವರಣದ ನರಸಿಂಹ ವನದಲ್ಲಿರುವ ಗುರು ನಿವಾಸಕ್ಕೆ ತೆರಳಿ ಶ್ರೀ ಜಗದ್ಗುರುಗಳ ಆಶೀರ್ವಾದ ಪಡೆದು ಮತ್ತೆ ಶೃಂಗೇರಿ ಆವರಣಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರು ಮಾಧ್ಯಮಗಳ ಜೊತೆ ಮಾತನಾಡಿ ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆ ಎಲ್ಲಾ ಅಭ್ಯರ್ಥಿಗಳ ಪರವಾಗಿ ಶಾರದಾಂಬೆಗೆ ಪೂಜೆ ಸಲ್ಲಿಸಿದ್ದೇನೆ. ನಮ್ಮ ರಾಷ್ಟ್ರಾಧ್ಯಕ್ಷರು ಎಲ್ಲರಿಗೂ ಬಿ-ಫಾರಂ ನೀಡಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೂ ಒಳ್ಳೆಯದಾಗಲಿ ಅಂತಾ ಶಾರದಂಬೆ ಬಳಿ ಕೇಳಿಕೊಂಡಿದ್ದೇನೆ. ನನ್ನ ನಾಮಪತ್ರವನ್ನು ದೇವರ ಸನ್ನಿಧಿಯಲ್ಲಿ ಇಟ್ಟು ಪೂಜೆ ಮಾಡಲಾಗಿದೆ ಎಂದರು.
ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಅವರಿಗೆ ಒಳ್ಳೆಯದಾಗಲಿ. ಮಂಡ್ಯ ಜನತೆಗೆ ಕುಮಾರಣ್ಣ ಏನು ಎಂಬುದು ಗೊತ್ತಿದೆ. ಮಂಡ್ಯ ಜನತೆಯ ಜೊತೆಗಿನ ನಮ್ಮ ತಂದೆಯ ಬಾಂಧವ್ಯ ಜನತೆಗೆ ಗೊತ್ತಿದೆ. ಮಂಡ್ಯ ಜನರ ಪ್ರೀತಿ ಉಳಿಸಿಕೊಳ್ಳಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಶೃಂಗೇರಿಯಲ್ಲಿ ಹೇಳಿದರು.