ಚಿಕ್ಕಮಗಳೂರು : ಕಾಫಿನಾಡಲ್ಲಿ ಅನ್ನಪೂರ್ಣೇಶ್ವರಿ ದರ್ಶನ ಸದ್ಯಕ್ಕೆ ಅಸಾಧ್ಯದ ಮಾತಾಗಿದೆ. ನಿರಂತರ ಮಳೆಯ ಕಾರಣ ಹೊರನಾಡಿನ ಎರಡೂ ಮಾರ್ಗವೂ ಬಂದ್ ಆಗಿದೆ. ಭಾರೀ ಮಳೆಯಿಂದ ಹೆಬ್ಬಾಳೆ ಬಂದ್ ಆಗಿದ್ದು, ರಸ್ತೆ ಕುಸಿತದಿಂದ ಹಳುವಳ್ಳಿ ಮಾರ್ಗವೂ ಬಂದ್ ಆಗಿದೆ. ಕಳಸಾದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಅನ್ಯ ಮಾರ್ಗ ಇದಾಗಿದ್ದು. ಇದೀಗ ಭೂಕುಸಿತದಿಂದ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು ಬಾಳೆಹೊನ್ನುರು, ಕಳಸದಿಂದ ಹೊರನಾಡಿಗೆ ಇರುವ ಪ್ರತ್ಯೇಕ ಮಾರ್ಗವೂ ಇಲ್ಲದಂತಾಗಿದೆ.
ಚಿಕ್ಕಮಗಳೂರಿನಲ್ಲಿ ಮುಂದುವರೆದ ವರುಣನ ಆರ್ಭಟ: ಸದ್ಯಕ್ಕಿಲ್ಲ ಅನ್ನಪೂರ್ಣೇಶ್ವರಿ ದರ್ಶನ ...!
ಕಾಫಿ ನಾಡಿನಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು ,ಇದೀಗ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ತೆರಳುವುದು ಅಸಾಧ್ಯವೆಂಬಂತಾಗಿದೆ, ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊರನಾಡಿನ ಎರಡು ಮಾರ್ಗವೂ ಕುಸಿತಗೊಂಡು ಬಂದ್ ಆಗಿದೆ.
ಮಳೆ ನಿರಂತರವಾಗಿರುವುದರಿಂದ ರಸ್ತೆ ಕುಸಿತಗೊಂಡಿರುವುದು
ಮಳೆ, ಗಾಳಿ ಅಬ್ಬರಕ್ಕೆ ಹಳುವಳ್ಳಿ ರಸ್ತೆಯೂ ಬಂದ್ ಆಗಿದ್ದು. ಹೊರನಾಡಿನ ಸಂಪರ್ಕ ಸಂಪೂರ್ಣ ಬಂದ್ ಆಗಿದೆ, ಅಷ್ಟೇ ಅಲ್ಲದೇ ದೇವರ ದರ್ಶನಕ್ಕೂ ವರುಣ ದೇವ ಅಡ್ಡಿಯಾಗಿರುವುದು ಭಕ್ತರಿಗೆ ಬೇಸರ ಮೂಡಿಸಿದೆ.