ಕರ್ನಾಟಕ

karnataka

ETV Bharat / state

ಮನೆ ಸೌಂದರ್ಯಕ್ಕೆ ಅಡ್ಡಿ ಎಂದು ಬಸ್ ನಿಲ್ದಾಣ ನೆಲಸಮ ಮಾಡಿದ ಗ್ರಾ.ಪಂ ಅಧ್ಯಕ್ಷೆ - S, Bidire Gram Panchayat

ನೂತನವಾಗಿ ಕಟ್ಟಿಸಿದ್ದ ಮನೆಯ ಸೌಂದರ್ಯಕ್ಕೆ ಸರ್ಕಾರಿ ಬಸ್ ನಿಲ್ದಾಣ ಅಡ್ಡಲಾಗಿದೆ ಎಂದು ಬಸ್ ನಿಲ್ದಾಣವನ್ನೇ ನೆಲಸಮ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಕಾರ್ಯಕ್ಕೆ ಸ್ಥಳೀಯರು ಆಕ್ರೋಶಗೊಂಡಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

G.P chairperson who demolished the bus station because of it disrupt the beauty of the house
ಮನೆ ಸೌಂದರ್ಯಕ್ಕೆ ಅಡ್ಡಿ ಎಂದು ಬಸ್ ನಿಲ್ದಾಣ ನೆಲಸಮ ಮಾಡಿದ ಗ್ರಾ.ಪಂ ಅಧ್ಯಕ್ಷೆ

By

Published : Jun 22, 2020, 7:42 PM IST

ಚಿಕ್ಕಮಗಳೂರು:ರಸ್ತೆ ಪಕ್ಕದಲ್ಲಿರೋ ಮನೆ ಕಾಣವುದಿಲ್ಲ ಎಂದು ಮನೆ ಮುಂದಿದ್ದ ಸರ್ಕಾರಿ ಬಸ್ ನಿಲ್ದಾಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧ್ವಂಸಗೊಳಿಸಿರುವ ಘಟನೆ ನಡೆದಿದೆ.

ಮನೆ ಸೌಂದರ್ಯಕ್ಕೆ ಅಡ್ಡಿ ಎಂದು ಬಸ್ ನಿಲ್ದಾಣ ನೆಲಸಮ ಮಾಡಿದ ಗ್ರಾ.ಪಂ ಅಧ್ಯಕ್ಷೆ

ಇಲ್ಲಿನ ಕಡೂರು ತಾಲೂಕಿನ ಎಸ್​​.ಬಿದಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಾಪುರ ಗ್ರಾಮದ ಬಳಿ ಅಧ್ಯಕ್ಷೆ ನೂತನವಾಗಿ ಮನೆ ನಿರ್ಮಿಸಿದ್ದು, ಮನೆಯ ಕಾಂಪೌಂಡ್​​​ ಸೌಂದರ್ಯಕ್ಕೆ ಬಸ್​ ನಿಲ್ದಾಣ ಅಡ್ಡಿಯಾಗಿದೆ ಎಂದು ಅಧ್ಯಕ್ಷೆ ಮನೆಯವರು ಸೇರಿ ನೆಲಕ್ಕುರುಳಿಸಿದ್ದಾರೆ.

ಈ ಮೂಲಕ ಅಧ್ಯಕ್ಷೆ ದ್ರಾಕ್ಷಾಯಣಮ್ಮ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ಥಳೀಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ ನಮ್ಮ ಮನೆಗೆ ದಾರಿ ಇರಲಿಲ್ಲ, ಸಾಲದಕ್ಕೆ ರಸ್ತೆ ಪಕ್ಕದ ಮನೆಗೆ ಬಸ್ ನಿಲ್ದಾಣ ಅಡ್ಡವಾಗಿದೆ ಎಂದೂ ದ್ರಾಕ್ಷಾಯಣಮ್ಮ ಹಾಗೂ ಅವರ ಮಕ್ಕಳಾದ ಪ್ರಭಾಕರ್ ಹಾಗೂ ಜಗದೀಶ್ ಜೆಸಿಬಿ ಹಾಗೂ ಟ್ರ್ಯಾಕ್ಟರ್ ತಂದು ಬಸ್ ನಿಲ್ದಾಣವನ್ನ ನೆಲ ಸಮಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸಿದ್ಧಾಪುರ ಗ್ರಾಮದ ಜನರು ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದಿದ್ದು ದ್ರಾಕ್ಷಾಯಣಮ್ಮ ಅವರ ಸದಸ್ಯತ್ವವನ್ನ ರದ್ದು ಮಾಡಬೇಕೆಂದು ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾಧಿಕಾರಿಗೆ ದೂರು ನೀಡಿ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details