ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿ ಶಾರದಾ ಪೀಠಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಕಳೆದ ರಾತ್ರಿಯಿಂದ ಇಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಶೃಂಗೇರಿ ಶಾರದಾ ಪೀಠದಲ್ಲಿ ದೇವೇಗೌಡ ದಂಪತಿಯಿಂದ ವಿಶೇಷ ಪೂಜೆ - Sringeri
ಲೋಕಸಭಾ ಚುನಾವಣೆ ಬಳಿಕವೂ ಪೂಜೆ, ಹೋಮ-ಹವನ ಅಂತ ಓಡಾಡುತ್ತಿರುವ ಮಾಜಿ ಪ್ರಧಾನಿ ಕುಟುಂಬ- ನಿನ್ನೆ ಶೃಂಗೇರಿ ಶಾರದಾ ಪೀಠಕ್ಕೆ ಆಗಮನ- ಇಲ್ಲಿಯೇ ವಾಸ್ತವ್ಯ ಹೂಡಿದ್ದ ಹೆಚ್ಡಿಡಿ ದಂಪತಿ- ಬೆಳಗ್ಗೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆ
ಬುಧವಾರ ರಾತ್ರಿ ದೇವಸ್ಥಾನಕ್ಕೆ ಆಗಮಿಸಿದ ಮಾಜಿ ದೇವೇಗೌಡ ದಂಪತಿ ರಾತ್ರಿ ಇಲ್ಲಿಯೇ ಉಳಿದುಕೊಂಡಿದ್ದರು. ಬೆಳಗ್ಗೆ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಗಿನ ಸುಪ್ರಭಾತ ಪೂಜೆಯಲ್ಲಿ ದೇವೇಗೌಡರಿಗೆ ಪತ್ನಿ ಚೆನ್ನಮ್ಮ ಸೇರಿದಂತೆ ಇತರರು ಸಾಥ್ ನೀಡಿದರು.
ಪೂಜೆ ಬಳಿಕ ನರಸಿಂಹ ವನದಲ್ಲಿರುವ ಗುರು ನಿವಾಸಕ್ಕೆ ತೆರಳಿ ಶ್ರೀ ಜಗದ್ಗುರುಗಳನ್ನು ಭೇಟಿ ಮಾಡಿದ ಮಾಜಿ ಪ್ರಧಾನಿ ಕುಟುಂಬಸ್ಥರು ಆಶೀರ್ವಾದ ಪಡೆದರು. ಪ್ರಕೃತಿ ಚಿಕಿತ್ಸೆ ಮುಗಿಸಿ ಶೃಂಗೇರಿಗೆ ಆಗಮಿಸಿರುವ ಇವರು ಇಂದು ಶೃಂಗೇರಿಯಲ್ಲಿ ಎಲ್ಲ ಪೂಜಾ ಕಾರ್ಯಕ್ರಮಗಳನ್ನು ಮುಗಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.