ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಸಾತ್ಕೋಳಿ ಎಂಬಲ್ಲಿ ದಂಪತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಸಾತ್ಕೋಳಿಯಲ್ಲಿ ದಂಪತಿ ಹತ್ಯೆ... ಕಾರಣ ನಿಗೂಢ
ಎನ್ಆರ್ ಪುರ ತಾಲೂಕಿನ ಮುತ್ತಿನಕೊಪ್ಪಗ್ರಾಮದ ಸಾತ್ಕೋಳಿ ಎಂಬಲ್ಲಿ ದಂಪತಿ ಕೊಲೆಯಾಗಿದ್ದು, ಕಾರಣ ಇನ್ನೂ ನಿಗೂಡವಾಗಿದೆ.
ಡಬಲ್ ಮರ್ಡರ್: ಸಾತ್ಕೋಳಿಯಲ್ಲಿ ಕೊಲೆಯಾಗಿರುವ ದಂಪತಿ
ಪತಿ ಧರ್ಮಯ್ಯ(45) ಹಾಗೂ ಪತ್ನಿ ಭಾರತಿ(31) ಮೃತ ದಂಪತಿ. ಇವರಿಗೆ 12 ವರ್ಷದ ಮಗನಿದ್ದಾನೆ. ಆದರೆ, ಕೊಲೆ ಮಾಡಿದವರ ಸುಳಿವು ಇನ್ನೂ ತಿಳಿದಿಲ್ಲ. ಜೊತೆಗೆ ಕೊಲೆಗೆ ನಿಖರ ಕಾರಣವೂ ತಿಳಿದು ಬಂದಿಲ್ಲ. ಸದ್ಯ ಮೃತ ದೇಹಗಳನ್ನು ಎನ್ಆರ್ ಪುರ ಸರ್ಕಾರಿ ಆಸ್ವತ್ರೆಗೆ ರವಾನೆ ಮಾಡಲಾಗಿದೆ.
ಇನ್ನೂ ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ಎನ್ಆರ್ ಪುರ ಪೋಲಿಸರು, ತನಿಖೆ ನಡೆಸುತ್ತಿದ್ದಾರೆ.