ಕರ್ನಾಟಕ

karnataka

ETV Bharat / state

ದೇವೇಗೌಡರು, ಬಿಎಸ್‌ವೈ, ಸಿದ್ದರಾಮಯ್ಯ ಇವರೆಲ್ಲ ಜನನಾಯಕರು.. ಸಚಿವ ಸಿ ಟಿ ರವಿ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಈವರೆಗೂ ಯಾರ್ಯಾರು ಬಿಜೆಪಿಗೆ ಬಂದಿಲ್ಲ ನೀವೇ ಹೇಳಿ. ಮಾಧವರಾವ್ ಸಿಂಧ್ಯಾ ಅವರ ಮಗ ಬಿಜೆಪಿ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಬಿಜೆಪಿ ಸೇರಿದ್ದಾರೆ. ಯಾವುದೂ ಅಸಾಧ್ಯವಲ್ಲ. ಸಿದ್ದರಾಮಯ್ಯನವರು ಬಿಜೆಪಿಗೆ ಬಂದರೂ ಆಶ್ಚರ್ಯಪಡಬೇಡಿ.

ಸಚಿವ ಸಿಟಿ ರವಿ
ಸಚಿವ ಸಿಟಿ ರವಿ

By

Published : Jun 1, 2020, 3:43 PM IST

ಚಿಕ್ಕಮಗಳೂರು :ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯನ್ನು ಹೊಗಳಲು ಸಾಧ್ಯವೆ ? ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಬಿಜೆಪಿಗೆ ಬಂದಾಗ ಮಾತ್ರ ಬಿಜೆಪಿ ಹೊಗಳಲು ಸಾಧ್ಯ. ಕಾಂಗ್ರೆಸ್​ನಲ್ಲಿದ್ದಾಗ ಬಿಜೆಪಿಯನ್ನು ಹೊಗಳಿದರೆ ಧಕ್ಕೆ ಬರುತ್ತದೆ. ಈ ಎಲ್ಲಾ ಸತ್ಯ ಅವರಿಗೆ ಗೊತ್ತಿದೆ. ಬಿಜೆಪಿಗೆ ಬಂದ ದಿನ ಸಿದ್ದರಾಮಯ್ಯನವರು ಬಿಜೆಪಿಯನ್ನು ಹೊಗಳುತ್ತಾರೆ. ಈವರೆಗೂ ಯಾರ್ಯಾರು ಬಿಜೆಪಿಗೆ ಬಂದಿಲ್ಲ ನೀವೇ ಹೇಳಿ. ಮಾಧವರಾವ್ ಸಿಂಧ್ಯಾ ಅವರ ಮಗ ಬಿಜೆಪಿ ಸೇರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಬಿಜೆಪಿ ಸೇರಿದ್ದಾರೆ. ಯಾವುದೂ ಅಸಾಧ್ಯವಲ್ಲ. ಸಿದ್ದರಾಮಯ್ಯನವರು ಬಿಜೆಪಿಗೆ ಬಂದರೂ ಆಶ್ಚರ್ಯಪಡಬೇಡಿ. ಅವರ ಮತ್ತೆ ಡಿ ಕೆ ಶಿವಕುಮಾರ್ ನಡುವಿನ ಶೀತಲ ಸಮರ, ಯಾವ ಮಟ್ಟಕ್ಕೆ ಬೇಕಾದರೂ ಮುಟ್ಟಬಹುದು ಎಂದರು.

ಜನ ನಾಯಕರು ಇರಬೇಕಾದ ಪಕ್ಷ ಬಿಜೆಪಿ.. ಸಚಿವ ಸಿಟಿ ರವಿ

ರಾಜ್ಯದಲ್ಲಿ ಹೆಚ್​ಡಿ ದೇವೇಗೌಡ, ಬಿ ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಇವರೆಲ್ಲರೂ ಜನ ನಾಯಕರು. ಹಾಗಾಗಿ ಜನನಾಯಕರು ಇರಬೇಕಾದ ಪಾರ್ಟಿ, ಭಾರತೀಯ ಜನತಾ ಪಾರ್ಟಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಟಿ ರವಿ ಹೇಳಿದರು.

ABOUT THE AUTHOR

...view details