ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮ ಪುತ್ರಿಯ ವಿವಾಹ ವಿಚಾರವಾಗಿ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದಾರೆ.
ಪುತ್ರಿ ವಿವಾಹ ವಿಚಾರ: ವಿನಯ್ ಗುರೂಜಿ ಆಶೀರ್ವಾದ ಪಡೆದ ಡಿಕೆಶಿ
ಮಗಳ ಮದುವೆ ಕುರಿತು ಡಿಕೆಶಿ ಅವರು ವಿನಯ್ ಗೂರುಜಿಯ ಅವರ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ವಿನಯ್ ಗುರೂಜಿ ಆಶೀರ್ವಾದ ಪಡೆದ ಡಿಕೆಶಿ
ಮಗಳ ಮದುವೆ ಕುರಿತು ಡಿಕೆಶಿ ಅವರು ವಿನಯ್ ಗೂರುಜಿಯ ಅವರ ಸಲಹೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮಾರ್ಚ್ 19ರಂದು ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡರ ಮಗಳ ಮದುವೆಗೆ ಬಂದಾಗ ಈ ವಿಚಾರವನ್ನು ಗುರೂಜಿ ಬಳಿ ಪ್ರಸ್ತಾಪ ಮಾಡಿದ್ದರು. ಸದ್ಯ ಡಿಕೆಶಿ ಮಗಳ ಮದುವೆಗೆ ವಿನಯ್ ಗುರೂಜಿ ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಈ ಹಿಂದೆ ದೂರವಾಣಿ ಮೂಲಕ ಮಗಳ ಮದುವೆ ವಿಚಾರವನ್ನು ಡಿಕೆಶಿ ಗುರೂಜಿ ಜೊತೆಗೆ ಮಾತನಾಡಿದ್ದರಂತೆ. ಸದ್ಯ ಮದುವೆಯ ವಿಚಾರ ಒಂದು ಹಂತಕ್ಕೆ ಬರುತ್ತಿದ್ದಂತೆ ಗುರೂಜಿಯ ಸಲಹೆ ಹಾಗೂ ಆರ್ಶಿವಾದ ಪಡೆದಿದ್ದಾರೆ.
Last Updated : Jun 5, 2020, 1:26 PM IST