ಕರ್ನಾಟಕ

karnataka

ETV Bharat / state

ಕಾಡು ಬಿಟ್ಟು ನಾಡಿಗೆ ಬಂದ ಜಿಂಕೆ ಮೇಲೆ ನಾಯಿಗಳ ದಾಳಿ - kannada news

ದಾಹ ತೀರಿಸಿಕೊಳ್ಳಲು ನೀರನ್ನು ಹುಡುಕುತ್ತ ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟು ಮಾನವೀಯತೆ ಮೆರೆದ ಸಂತವೇರಿ ಗ್ರಾಮದ ಜನ.

ನೀರಿಗಾಗಿ ಕಾಡು ಬಿಟ್ಟು ನಾಡಿಗೆ ಬಂದ ಜಿಂಕೆಯ ರಕ್ಷಣೆ

By

Published : Apr 27, 2019, 5:08 PM IST

ಚಿಕ್ಕಮಗಳೂರು: ನೀರನ್ನು ಹುಡುಕುತ್ತ ಕಾಡಿನಿಂದ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳು ದಾಳಿ ಮಾಡಿದ್ದು, ಗಂಭೀರ ಗಾಯಗೊಂಡಿದ್ದ ಜಿಂಕೆಯನ್ನ ಗ್ರಾಮಸ್ಥರು ರಕ್ಷಿಸಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ನೀರಿನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯ ಮೇಲೆ ನಾಯಿಗಳು ದಾಳಿ ಮಾಡಿ ಘಾಸಿಗೊಳಿಸಿದ್ದು, ಜಿಲ್ಲೆಯ ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದ ಜನರು ನಾಯಿಗಳಿಂದ ಜಿಂಕೆಯನ್ನ ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಗೆ ಒಪ್ಪಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

...view details