ಕರ್ನಾಟಕ

karnataka

ETV Bharat / state

ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಬಂದ ಜಿಂಕೆ: ಅಡುಗೆ ಮನೆಯಲ್ಲಿ ಬಿದ್ದು ಇಬ್ಬರಿಗೆ ಗಾಯ - ಮೂಡಿಗೆರೆ ತಾಲೂಕಿನಲ್ಲಿ ನಾಯಿಗಳ ದಾಳಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಜಿಂಕೆಯೊಂದು ಗುಡ್ಡದ ಮೇಲಿಂದ ಮನೆ ಮೇಲೆ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ.

ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿ ಬಂದ ಜಿಂಕೆ

By

Published : Sep 8, 2019, 7:27 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಜಿಂಕೆಯೊಂದು ಗುಡ್ಡದ ಮೇಲಿಂದ ಮನೆ ಮೇಲೆ ಬಿದ್ದಿರೋ ಘಟನೆ ನಡೆದಿದೆ.

ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಗುಡ್ಡದ ಮೇಲಿದ್ದ ಜಿಂಕೆಯನ್ನು ಕಂಡ ನಾಯಿಗಳು ದಾಳಿಗೆ ಮುಂದಾಗಿವೆ. ಈ ವೇಳೆ ಭಯದಿಂದ ಓಡಿದ ಜಿಂಕೆ ಸುಮಾರು 10-15 ಅಡಿ ಎತ್ತರದಿಂದ ಮನೆ ಮೇಲೆ ಜಿಗಿದಿದೆ.

ಈ ವೇಳೆ, ಮನೆಯ ಹಂಚುಗಳು ಮುರಿದು, ರೂಫಿಂಗ್‍ನ ರೀಪರ್​​ಗಳು ಕೂಡ ಮುರಿದು ಅಡುಗೆ ಮನೆಯೊಳಗೆ ಬಿದ್ದಿದೆ. ಅಡುಗೆ ಮನೆಯಲ್ಲಿದ್ದ ತಂದೆ, ಮಗಳು ಇಬ್ಬರಿಗೂ ಗಾಯವಾಗಿದೆ. ಗಾಯಾಳುಗಳನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಂಕೆ ಕೂಡ ಏನೂ ಆಗದೆ ಬಿದ್ದ ಕೂಡಲೇ ಎದ್ದು ಓಡಿ ಹೋಗಿದೆ.

ABOUT THE AUTHOR

...view details