ಕರ್ನಾಟಕ

karnataka

By

Published : Apr 30, 2020, 1:42 PM IST

ETV Bharat / state

ರಸ್ತೆ ಖಾಲಿ ಇದೆ ಎಂದು ರೋಡಿಗೆ ಬಂದ ಗರ್ಭಿಣಿ ಜಿಂಕೆ ಅಪಘಾತದಲ್ಲಿ ಸಾವು, ರೋದಿಸಿದ ಸಂಗಾತಿಗಳು

ಲಾಕ್ ಡೌನ್​ನಿಂದಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ವೇಳೆ ಗರ್ಭಿಣಿ ಜಿಂಕೆಯೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದೆ.

deer death

ಚಿಕ್ಕಮಗಳೂರು:ಗರ್ಭಿಣಿ ಜಿಂಕೆಯೊಂದುರಸ್ತೆಯಲ್ಲಿ ಓಡಾಡುತ್ತಿದ್ದ ವೇಳೆ ವಾಹನ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲೇ ಸಾವನ್ನಪ್ಪಿದೆ.

ಜಿಲ್ಲೆಯಲ್ಲಿ ಲಾಕ್ ಡೌನ್​ನಿಂದಾಗಿ ರಸ್ತೆಗಳಲ್ಲಿ ಜಿಂಕೆಗಳು ಸ್ವಚ್ಛಂದವಾಗಿ ಓಡಾಟ ನಡೆಸುತ್ತಿದ್ದವು. ಆದರೆ ಐದು ವರ್ಷದ ಜಿಂಕೆ ಮೃತಪಟ್ಟಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಂಕೆಯ ಸಾವಿನಿಂದ ದೂರದಲ್ಲಿ ನಿಂತ ಸಂಗಾತಿಗಳು ರೋದಿಸುತ್ತಿರುವುದು ಕಂಡುಬಂದಿದೆ.

ಮೂಡಿಗೆರೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಾಹನ ಸಂಚಾರ ಇಳಿಮುಖವಾದ ಹಿನ್ನಲೆ ಕಾಡು ಪ್ರಾಣಿಗಳು ರಸ್ತೆಗೆ ಬರುತ್ತಿದ್ದು, ರಸ್ತೆಯಲ್ಲಿ ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳ ಓಡಾಟ ಕಂಡು ಬರುತ್ತಿದೆ.

ABOUT THE AUTHOR

...view details