ಚಿಕ್ಕಮಗಳೂರು:ಜಿಲ್ಲೆಯ ಕೊಪ್ಪ ಪಟ್ಟಣದ ಟಿ.ಎಂ ರಸ್ತೆಯಲ್ಲಿರುವ ಹಾಳು ಬಿದ್ದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಒಂದು ವರ್ಷದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ಮನೆಯ ಮಾಲೀಕ ಮನೆಯ ದುರಸ್ತಿ ಸಲುವಾಗಿ ಮನೆ ನೋಡಲು ತೆರಳಿದಾಗ ಮೃತದೇಹ ಪತ್ತೆಯಾಗಿದೆ.
ಜಯಲಕ್ಷ್ಮಿ ಹಾಲ್ನ ಮಾಲೀಕರಾದ ಚಂದ್ರ ಮೋಹನ್ ಅವರ ಹಳೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಗುರುತು ಈವರೆಗೂ ಪತ್ತೆಯಾಗಿಲ್ಲ.