ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಲ್ಲಿ ಪ್ರಮೋಷನ್ ಬೇಕು ಎಂದರೆ ಜೈಲಿಗೆ ಹೋಗಬೇಕು: ಸಿ ಟಿ ರವಿ ವ್ಯಂಗ್ಯ - ವಿನಯ್ ಕುಲಕರ್ಣಿ ಬಗ್ಗೆ ಸಿಟಿ ರವಿ ಹೇಳಿಕೆ

ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕು ಅಂದ್ರೆ ಭ್ರಷ್ಟಾಚಾರ ಮಾಡಬೇಕು, ಜೈಲಿಗೆ ಹೋಗಬೇಕು ಎಂದು ಕಾಂಗ್ರೆಸ್ ವಿರುದ್ಧ ಸಿ ಟಿ ರವಿ ಹೇಳಿಕೆ ನೀಡಿದ್ದಾರೆ.

ct ravi statement against congress
ಸಿ ಟಿ ರವಿ ಹೇಳಿಕೆ

By

Published : Aug 24, 2021, 3:06 PM IST

ಚಿಕ್ಕಮಗಳೂರು: ಕಾಂಗ್ರೆಸ್‍ನಲ್ಲಿ ಪ್ರಮೋಷನ್ ಸಿಗಬೇಕು ಅಂದ್ರೆ ಜೈಲಿಗೆ ಹೋಗಬೇಕು. ಪ್ರಮೋಷನ್ ಸಿಗಬೇಕು ಅಂದ್ರೆ ಭ್ರಷ್ಟಾಚಾರ ಮಾಡಬೇಕು ಎಂದು ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಸಿ ಟಿ ರವಿ ಹೇಳಿಕೆ

ವಿನಯ್ ಕುಲಕರ್ಣಿ ಈಗ ನಿರಪರಾಧಿಯೂ ಅಲ್ಲ, ಅಪರಾಧಿಯೂ ಅಲ್ಲ, ಆಪಾದಿತ. ಭ್ರಷ್ಟಾಚಾರ ಕಾಂಗ್ರೆಸ್‍ನ ರಾಜಕೀಯ ವ್ಯವಸ್ಥೆಯ ಒಂದು ಭಾಗ. ಅಲ್ಲಿ ಗೂಂಡಾಗಿರಿ ಪ್ರಮೋಷನ್‍ಗೆ ಇರೋ ಒಂದು ಮಾದರಿ. ಡಿಕೆಶಿ ಅವರು ಬೆಳೆದ ಬಂದ ರೀತಿಯಲ್ಲೇ ಆಲೋಚನೆ ಮಾಡುತ್ತಿದ್ದಾರೆ. ಹಿಂದೆ ರಾಜೀವ್ ಗಾಂಧಿ ಅವರು ನನ್ನ ಮೇಲೆ ಗೂಂಡಾ ಅಂತ ಬಂದಾಗ, ಗೂಂಡಾಗಳಿಗೆ ನಾವು ವಿಶೇಷವಾದ ಆದ್ಯತೆ ಕೊಡಬೇಕೆಂದು ಅವರೇ ಹೇಳಿದ್ದಾರೆ.

ಉಳಿದವರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡಬೇಕಾಗಿದೆ. ಮುಂದೆ ಜನ ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದು ಸಿಟಿ ರವಿ ಇದೇ ವೇಳೆ ಹೇಳಿದರು.

ಇದನ್ನೂ ಓದಿ:ಮುನಿಸು ಮರೆತು ಅಧಿಕಾರ ಸ್ವೀಕರಿಸಿದ ಸಚಿವ ಆನಂದ್ ಸಿಂಗ್

ABOUT THE AUTHOR

...view details