ಕರ್ನಾಟಕ

karnataka

ETV Bharat / state

ಪಾದರಾಯನಪುರ ಜಮೀರ್ ಅವರಪ್ಪನ ಆಸ್ತಿನಾ?.... ಸಿ ಟಿ ರವಿ ವಾಗ್ದಾಳಿ - CT Ravi spark against jameer in chikmagaluru

ಜಮೀರ್​ಗೆ ಒಂದು ಕಾನೂನು, ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ. 224 ಜನ ಶಾಸಕರಲ್ಲಿ ನೀನೂ ಒಬ್ಬ. ಫಾದರ್ ಪ್ರಾಪರ್ಟಿ ಆದರೂ ದೇಶದೊಳಗಿದ್ದಾಗ ಕಾನೂನಿಗೆ ಗೌರವ ಕೊಡಬೇಕು ಎಂದು ಜಮೀರ್​ ಹೇಳಿಕೆ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಸಿ. ಟಿ. ರವಿ
ಸಿ. ಟಿ. ರವಿ

By

Published : Apr 22, 2020, 1:44 PM IST

Updated : Apr 22, 2020, 2:30 PM IST

ಚಿಕ್ಕಮಗಳೂರು: ಪಾದರಾಯನಪುರಕ್ಕೆ ಹೋಗಲು ಅನುಮತಿ ತೆಗೆದುಕೊಂಡು ಹೋಗಬೇಕಂದರೆ ನೀನೇನು ಮಹಮದ್ ಆಲಿ ಜಿನ್ನಾನಾ...? ಎಂದು ಸಚಿವ ಸಿ. ಟಿ. ರವಿ ಅವರು ಜಮೀರ್ ಅಹಮದ್ ಖಾನ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಪಾಕಿಸ್ತಾನ ಹುಟ್ಸಿದ್ದು ಜಿನ್ನಾ, ಪಾದರಾಯನಪುರ ಜಮೀರ್ ಫಾದರ್ ಪ್ರಾಪರ್ಟಿನಾ..? ಎಂದು ಶಾಸಕ ಜಮೀರ್ ಅಹಮದ್ ಖಾನ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ನೀನ್ಯಾವ ಸೀಮೆ ತೋಟದಪ್ಪನ ನಾಯಕ ಎಂದು ಮುಖ್ಯಮಂತ್ರಿಗಳು ಪ್ರಶ್ನೆ ಮಾಡಿದ್ದಾರೆ. ನಾನು ಅದನ್ನೇ ಪ್ರಶ್ನೆ ಮಾಡುತ್ತೇನೆ. ನಾನು ಬಂದಾಗಲೇ ಜಮೀರ್ ಅಹಮದ್ ವಿಧಾನಸಭೆಗೆ ಬಂದದ್ದು, ಜಮೀರ್​ಗೆ ಒಂದು ಕಾನೂನು, ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ. 224 ಜನ ಶಾಸಕರಲ್ಲಿ ನೀನೂ ಒಬ್ಬ. ಫಾದರ್ ಪ್ರಾಪರ್ಟಿ ಆದರೂ ದೇಶದೊಳಗಿದ್ದಾಗ ಕಾನೂನಿಗೆ ಬದ್ಧರಾಗಿರಬೇಕು ಎಂದು ವಾಮಾಗೋಚರವಾಗಿ ಹರಿಹಾಯ್ದರು.

Last Updated : Apr 22, 2020, 2:30 PM IST

ABOUT THE AUTHOR

...view details