ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೊಲ ಉಳುಮೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
VIDEO: ಹೊಲ ಉಳುಮೆ ಮಾಡಿದ ಸಿ.ಟಿ.ರವಿ - chikkamagaluru news
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೊಲ ಉಳುಮೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಶಾಸಕ ಸಿ.ಟಿ.ರವಿ
ಚಿಕ್ಕಮಗಳೂರು ತಾಲೂಕಿನ ಸಗನೀಪುರ ಗ್ರಾಮಕ್ಕೆ ಕೆರೆ ವೀಕ್ಷಣೆಗೆಂದು ಹೋಗಿದ್ದ ವೇಳೆ, ಅಲ್ಲಿಯೇ ಹೊಲ ಉಳುಮೆ ಮಾಡುತ್ತಿದ್ದ ರೈತನಿಂದ ಎತ್ತುಗಳನ್ನು ಪಡೆದು ಉಳುಮೆ ಮಾಡಿದ್ದಾರೆ.
ಇಂದು ಹಿರೇಮಗಳೂರು ಕೆರೆ ಏರಿ ಕಾಮಗಾರಿ ವೀಕ್ಷಣೆಗೆ ಶಾಸಕ ಸಿ.ಟಿ.ರವಿ ತೆರಳಿದ್ದರು. ವೀಕ್ಷಣೆ ಬಳಿಕ ಹೊಲದಲ್ಲಿ ರೈತರನ್ನು ಕಂಡು ಹೊಲಕ್ಕೆ ಹೋಗಿದ್ದು, ರೈತರಿಂದ ಎತ್ತುಗಳನ್ನ ಪಡೆದು ಉಳುಮೆ ಮಾಡಿ ಗಮನ ಸೆಳೆದರು.