ಕರ್ನಾಟಕ

karnataka

By

Published : Oct 3, 2019, 1:54 PM IST

Updated : Oct 3, 2019, 6:58 PM IST

ETV Bharat / state

ಮುಂದುವರೆದ ರೈತರ ಆತ್ಮಹತ್ಯೆ: ನೆರೆ ಪರಿಹಾರ ನೀಡದ ಕ್ರಮ ಖಂಡಿಸಿ ಕಳಸ ಬಂದ್​

ನೆರೆ ಪರಿಹಾರ ಬಾರದ ಹಿನ್ನೆಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಜನರು ಪ್ರತಿಭಟನೆ ನಡೆಸಿದರು.

ಮುಂದುವರೆದ ರೈತರ ಆತ್ಮಹತ್ಯೆ ಖಂಡಿಸಿ ಕಳಸ ಬಂದ್​

ಚಿಕ್ಕಮಗಳೂರು:ಜಿಲ್ಲೆಯಲ್ಲಿ ನೆರೆ ಸಂತ್ರಸ್ತ ರೈತರಿಗೆ ಹಾಗೂ ಜನರಿಗೆ ಪರಿಹಾರ ಬಾರದ ಕಾರಣ ಕಳಸ ತಾಲೂಕಿನಲ್ಲಿ ಮನನೊಂದು ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿನ್ನಲೆಯಲ್ಲಿ, ಸಾರ್ವಜನಿಕರು ಮೂಡಿಗೆರೆ ತಾಲೂಕಿನ ಕಳಸ ಬಂದ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಅಂಗಡಿ-ಮುಂಗಟ್ಟು ಬಂದ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳ ಹಿಂದೆ ಕಾರ್ಗದ್ದೆ ಗ್ರಾಮದಲ್ಲಿ ರೈತನೋರ್ವ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಇನ್ನೋರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದು, ರಾಜ್ಯದಲ್ಲಿ ಸರ್ಕಾರ ಇದ್ದೂ ಇಲ್ಲದಂತಾಗಿದೆಯೆಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ರೈತರ ಆತ್ಮಹತ್ಯೆ ಖಂಡಿಸಿ ಕಳಸ ಬಂದ್​

ನೆರೆ ಪರಿಹಾರ ವಿಳಂಬ: ಚಿಕ್ಕಮಗಳೂರಲ್ಲಿ ರೈತ ಆತ್ಮಹತ್ಯೆ

ಸಚಿವರು, ಶಾಸಕರು, ಸಿಎಂ ಭೇಟಿ ನಾಮಕಾವಸ್ತೆಗಷ್ಟೇ ಎಂಬಂತಾಗಿದ್ದು, ಕಳಸದ ಬಹುತೇಕ ಭಾಗ ಮಹಾ ಮಳೆಯಿಂದ ತೀವ್ರ ಸಂಕಷ್ಟಕ್ಕೀಡಾಗಿದೆ. ಸರ್ಕಾರದ ಪರಿಹಾರ ಇನ್ನೂ ಮರಿಚಿಕೆ ಆಗಿದೆ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Last Updated : Oct 3, 2019, 6:58 PM IST

ABOUT THE AUTHOR

...view details