ಚಿಕ್ಕಮಗಳೂರು: ಶೃಂಗೇರಿ ಶಾರದಾ ಪೀಠಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ ಅವರು ಬೆಂಗಳೂರಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ.
ಕೈ-ತೆನೆಯ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಶಾರದೆಯ ಮೊರೆ ಹೋದ ಸಿಎಂ ಹೆಚ್ಡಿಕೆ - ಶೃಂಗೇರಿ ಶಾರದಾ ಪೀಠ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರದಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಶೃಂಗೇರಿ ಶಾರದಾ ದೇವಿ ಆಶೀರ್ವಾದ ಪಡೆಯುವ ಸಲುವಾಗಿ ಸಿಎಂ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಶೃಂಗೇರಿಯ ಮೆಣಸೆಯಲ್ಲಿ ಮತನಾಡಿದ ಕುಮಾರಸ್ವಾಮಿ, ಚುನಾವಣೆ ಗೆಲ್ಲಲು ದೇವರ ಆಶೀರ್ವಾದ ಬೇಕು. ಕೇವಲ ನಿಖಿಲ್ ಒಬ್ಬರಿಗಾಗಿ ತಾಯಿ ಸನ್ನಿಧಿಗೆ ಬಂದಿಲ್ಲ. 28 ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಬಂದಿದ್ದೇನೆ.
ನಮ್ಮ ಕುಟುಂಬದ ನಂಬಿಕೆಯ ಹಿನ್ನೆಲೆ ಶೃಂಗೇರಿ ತಾಯಿಯ ಆಶೀರ್ವಾದ ಪಡೆಯಲು ಬಂದಿದ್ದೇನೆ. ಸುಮಲತಾ ಚುನಾವಣಾ ಸ್ಪರ್ಧೆ ವಿಚಾರದ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ. ಮಂಡ್ಯ ಜನತೆಯ ಬಗ್ಗೆ ಏನೆಲ್ಲಾ ಮಾಡುತ್ತಾರೆ ನೋಡೋಣ ಎಂದರು.