ಚಿಕ್ಕಮಗಳೂರು: ನಗರದ ಸಿನಿಮಾ ಥಿಯೇಟರ್ವೊಂದರಲ್ಲಿ 'ವಿಕ್ರಾಂತ್ ರೋಣ' ಚಿತ್ರ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಗಲಾಟೆಯಲ್ಲಿ ನಡುರಸ್ತೆಯಲ್ಲೇ ಹಾಡಹಗಲೇ ಲಾಂಗ್ ಝಳಪಿಸಿ, ಯುವಕನೋರ್ವ ಮೇಲೆ ಹಲ್ಲೆ ಮಾಡಲಾಗಿದೆ.
ಮಿಲನ ಚಿತ್ರಮಂದಿರದ ಹೊರಾಂಗಣದಲ್ಲಿ ಈ ಮಾರಾಮಾರಿ ಆಗಿದ್ದು, ಭರತ್ ಎಂಬ ಯುವಕನ ಮೇಲೆ ಎದುರಾಳಿ ಗುಂಪು ಹಲ್ಲೆ ನಡೆಸಿದೆ. ಭರತ್ ನೆಲಕ್ಕೆ ಬಿದ್ದರೂ ಬಿಡದೆ ಯುವಕರ ತಂಡ ಹಲ್ಲೆಗೈದಿದ್ದು, ತೀವ್ರವಾಗಿ ಗಾಯಗೊಂಡಿದ್ದಾನೆ.