ಕರ್ನಾಟಕ

karnataka

ETV Bharat / state

ಚೀನಿ ಪ್ರವಾಸಿಗನಿಗೆ ಮಾಸ್ಕ್ ನೀಡಲು ಓಕೆ... ಆದ್ರೆ ಕೊಠಡಿ ಯಾಕೆ? - China tourist in Mudigere

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬುಲೆಟ್ ಬೈಕ್ ನಲ್ಲಿ ಬಂದಿದ್ದ ಚೀನಾ ಪ್ರವಾಸಿಗನನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ. ಸ್ಥಳೀಯ ಯಾವುದೇ ಹೊಟೇಲ್ ನಲ್ಲಿ ಆತನಿಗೆ ಕೊಠಡಿ ನೀಡದ ಕಾರಣ ಪ್ರವಾಸಿಗ ಪುಂಗಿಮ್ ರಸ್ತೆಯಲ್ಲಿಯೇ ಟೆಂಟ್ ಹಾಕಿಕೊಂಡು ಮಲಗಿದ್ದಾನೆ.

China tourist was denied from lodge fecility in Mudigere
ಚೀನಾ ಪ್ರವಾಸಿಗನಿಗೆ ಕೊಠಡಿ ನೀಡಲು ನಿರಾಕರಣೆ: ಮಾಸ್ಕ್​ ನೀಡಿದ ಸ್ಥಳೀಯರಿಗೆ ಥಾಂಕ್ಸ್​ ಹೇಳಿದ ಪುಂಗಿಮ್​

By

Published : Mar 19, 2020, 2:50 PM IST

ಚಿಕ್ಕಮಗಳೂರು:ಪ್ರವಾಸಕ್ಕೆಂದು ಬಂದ ಚೀನಾ ಪ್ರವಾಸಿಗನಿಗೆ ಸ್ಥಳೀಯ ಹೊಟೇಲ್ ಮಾಲೀಕರು ಉಳಿದುಕೊಳ್ಳಲು ಕೊಠಡಿ ನೀಡಲು ನಿರಾಕರಿಸಿರುವ ಘಟನೆ ನಡೆದಿದೆ.

ಮಾಸ್ಕ್​ ನೀಡಿದ ಸ್ಥಳೀಯರಿಗೆ ಥಾಂಕ್ಸ್​ ಹೇಳಿದ ಪುಂಗಿಮ್​

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರಕ್ಕೆ ಬುಲೆಟ್ ಬೈಕ್​​​​ನಲ್ಲಿ ಬಂದಿದ್ದ ಚೀನಿ ಪ್ರವಾಸಿಗನನ್ನು ಕಂಡು ಸ್ಥಳೀಯರು ಭಯ ಭೀತರಾಗಿದ್ದಾರೆ. ಸ್ಥಳೀಯ ಯಾವುದೇ ಹೊಟೇಲ್​ನಲ್ಲಿ ಆತನಿಗೆ ಕೊಠಡಿ ನೀಡದ ಕಾರಣ ಪ್ರವಾಸಿಗ ಪುಂಗಿಮ್ ರಸ್ತೆಯಲ್ಲಿಯೇ ಟೆಂಟ್ ಹಾಕಿಕೊಂಡು ಮಲಗಿದ್ದಾನೆ.

ಸ್ಥಳೀಯರ ವರ್ತನೆ ಕಂಡು ಆತ 'ನನಗೆ ನೋ ಕೊರೊನ' ಎಂದೂ ಹೇಳಿದ್ದಾನೆ. ಕೊಟ್ಟಿಗೆಹಾರದಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಮಾಡುತ್ತಿರುವ ಪುಂಗಿಮ್ ಮಾಸ್ಕ್ ಧರಿಸದೇ ಎಲ್ಲಾ ಕಡೆ ಪ್ರವಾಸ ಮಾಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಆತನಿಗೆ ಮಾಸ್ಕ್ ನೀಡಿ ಎಲ್ಲಾ ಕಡೆ ಇದನ್ನು ಧರಿಸುವಂತೆ ಮನವಿ ಮಾಡಿದ್ದಾರೆ. ಪುಂಗಿಮ್ ಮಾಸ್ಕ್​ ಸ್ವೀಕರಿಸಿ, ಧರಿಸಿ ಸ್ಥಳೀಯರಿಗೆ ಧನ್ಯವಾದ ಹೇಳಿದ್ದಾನೆ.

ABOUT THE AUTHOR

...view details