ಚಿಕ್ಕಮಗಳೂರು:ಕಾಫಿ ನಾಡಿನ ಅಬ್ಲೈಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಎಫ್.ಎಂ.ಎಸ್.ಸಿ. ಱಲಿ ಜಿಲ್ಲೆಯ ಜನರಿಗೆ ಭರ್ಜರಿ ಮಜಾ ನೀಡಿದೆ. ಡರ್ಟ್ ಟ್ರ್ಯಾಕ್ ರೇಸ್ನ ಮೊದಲೆರಡು ರೌಂಡ್ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಮುಗಿದಿದ್ದು, ಕಾಫಿನಾಡಲ್ಲಿ ಮೂರನೇ ರೌಂಡ್ ಆಯೋಜನೆಗೊಂಡಿದೆ.
ಈ ಱಲಿಯಲ್ಲಿ 56 ಜನ ಸ್ಪರ್ಧಿಗಳು ಇದ್ದು 196 ಜನರ ಪ್ರವೇಶಕ್ಕೆ ಅವಕಾಶ ಮಾಡಲಾಗಿತ್ತು. ಏಕ ಕಾಲದಲ್ಲಿ 10 ರೀತಿಯ ವಿಭಾಗಗಳಿಗೆ ನಡೆದ ರೇಸಿಂಗ್ನಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದವು. ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ದವು. ಕೆಲವು ಕಾರ್ ಕ್ರೇಜ್ ಪ್ರಿಯರು ಆಲ್ಟೋ ಹಾಗೂ ಮಾರುತಿ 800 ಕಾರನ್ನೂ ತಂದು ಱಲಿಯಲ್ಲಿ ಪಾಲ್ಗೊಂಡು ಖುಷಿ ಪಟ್ಟರು.
ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ ಕಾರ್ ರೇಸ್ ರೇಸ್ಗೆ ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಶಿವಮೊಗ್ಗ, ಹಾಸನ, ಮೂಡಿಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಭಾಗವಹಿಸಿದ್ದರು. ಚೆನ್ನೈ, ಕೇರಳ, ತಮಿಳುನಾಡಿನಿಂದಲೂ ಸ್ಪರ್ಧಾಳುಗಳು ಬಂದಿದ್ದರು. ಹೊರ ಜಿಲ್ಲೆ-ರಾಜ್ಯದ ಸ್ಪರ್ಧಾಗಳುಗಳಿಗೆ ಸ್ಥಳೀಯ ಪ್ರತಿಭೆಗಳು ತೊಡೆ ತಟ್ಟಿದ್ದು ಱಲಿಯ ವಿಶೇಷವಾಗಿತ್ತು.
ಇದೇ ಮೊದಲ ಬಾರಿಗೆ ರೇಸ್ನಲ್ಲಿ ಪಾಲ್ಗೊಂಡು ಸ್ಥಳೀಯ ಪ್ರತಿಭೆ ಶ್ರೀಮಯಿ ಮಾತನಾಡಿ, ನನಗೆ ಇದೇ ಫಸ್ಟ್ ಱಲಿ. ಆರಂಭದಲ್ಲಿ ಭಯವಾಗಿತ್ತು. ಈಗ ಡ್ರೈವ್ ಮಾಡಿದ ಮೇಲೆ ಭಯವಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ರೇಸ್ನಲ್ಲಿ ಭಾಗವಹಿಸಲು ಇಚ್ಛಿಸುತ್ತೇನೆ ಎಂದರು.
ಇದನ್ನೂ ಓದಿ:ರುಚಿ, ಗುಣಮಟ್ಟದಿಂದ ಬಾಯಲ್ಲಿ ನೀರೂರಿಸುವ ಪ್ರಿಯಾ ಫುಡ್ಸ್ಗೆ 'ರಫ್ತು ಶ್ರೇಷ್ಠ ಪ್ರಶಸ್ತಿ'