ಕರ್ನಾಟಕ

karnataka

ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಕೊರೊನಾ ಸೋಂಕಿನಿಂದ ಗುಣಮುಖ

By

Published : Jul 17, 2020, 11:39 PM IST

ಕೊರೊನಾ ಕಾಯಿಲೆಯನ್ನು ಸ್ವಲ್ವ ಜಾಗ್ರತೆಯಾಗಿ ನಿಭಾಯಿಸಬೇಕು. ಆದಷ್ಟು ಸಾಮಾಜಿಕ ಅಂತರ, ಮಾಸ್ಕ್ ಬಳಸಬೇಕು. ಕೊರೊನಾ ಬಂದರೆ ಜೀವಕ್ಕೆ ತೊಂದರೆಯಿದೆ ಎಂಬ ಆತಂಕ ಬೇಡ. ಆಸ್ವತ್ರೆಗೆ ಹೋಗುವ ವೇಳೆ ಹೆಚ್ಚು ಆತಂಕ ನನ್ನಲ್ಲಿಯೂ ಇತ್ತು. ಮಾಧ್ಯಮಗಳು ಈ ಖಾಯಿಲೆಯನ್ನು ದೊಡ್ಡದಾಗಿ ಬಿಂಬಿಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

chikkmagaluru Mlc m.k.pranesh discharged
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಕೊರೊನಾ ಸೋಂಕಿನಿಂದ ಗುಣಮುಖ

ಚಿಕ್ಕಮಗಳೂರು:ಕೊರೊನಾ ಸೋಂಕಿಗೆ ಒಳಗಾಗಿದ್ದ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರು ಆಸ್ಪತ್ರೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಕೊರೊನಾ ಸೋಂಕಿನಿಂದ ಗುಣಮುಖ

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊರೊನಾ ಕಾಯಿಲೆಯನ್ನು ಸ್ವಲ್ವ ಜಾಗ್ರತೆಯಾಗಿ ನಿಭಾಯಿಸಬೇಕು. ಆದಷ್ಟು ಸಾಮಾಜಿಕ ಅಂತರ, ಮಾಸ್ಕ್ ಬಳಸಬೇಕು. ಕೊರೊನಾ ಬಂದರೆ ಜೀವಕ್ಕೆ ತೊಂದರೆಯಿದೆ ಎಂಬ ಆತಂಕ ಬೇಡ. ಆಸ್ವತ್ರೆಗೆ ಹೋಗುವ ವೇಳೆ ಹೆಚ್ಚು ಆತಂಕ ನನ್ನಲ್ಲಿಯೂ ಇತ್ತು. ಮಾಧ್ಯಮಗಳು ಈ ಖಾಯಿಲೆಯನ್ನು ದೊಡ್ಡದಾಗಿ ಬಿಂಬಿಸಬಾರದು. ಆಸ್ವತ್ರೆಯಲ್ಲಿ ವೈದ್ಯರು ಹಾಗೂ ನರ್ಸ್​ಗಳು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಾನು ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ನಮ್ಮನ್ನು ಕುಟುಂಬದ ಸದಸ್ಯರಿಗಿಂತ ಹೆಚ್ಚಾಗಿ ಅಲ್ಲಿನ ಸಿಬ್ಬಂದಿ ನೋಡಿಕೊಂಡಿದ್ದಾರೆ.

ದೇವರನ್ನು ಪೋಟೋದಲ್ಲಿ ಮಾತ್ರ ನಾವು ನೋಡಿರುತ್ತೇವೆ. ಆದರೆ ಕಣ್ಣ ಮುಂದೆ ಇರುವ ದೇವರು ವೈದ್ಯರು. ಕಳೆದ ಮೂರೂವರೆ ತಿಂಗಳಿಂದ ಕೊರೊನಾ ವಾರಿಯರ್ಸ್​ಗೆ ಸಂಬಳವಾಗಿಲ್ಲ. ಆದರೆ ಅದನ್ನು ಮರೆತು ಅವರೆಲ್ಲರೂ ಕೆಲಸ ಮಾಡುತ್ತಿದ್ದಾರೆ. ಯಾರೂ ಕೂಡ ಕೊರೊನಾ ವೈರಸ್​ಗೆ ಭಯ ಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ಇದರ ಬಗ್ಗೆ ಜಾಗರೂಕತೆಯಿಂದ ಇರಬೇಕು ಎಂದಿದ್ದಾರೆ.

ABOUT THE AUTHOR

...view details